ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪೊಲೀಸ್(Police) ಇಲಾಖೆ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ ನೀಡುವ ರಾಷ್ಟ್ರಪತಿ ಪದಕ ಈ ವರ್ಷ 19 ಅಧಿಕಾರಿಗಳಿಗೆ ಸಂದಿದೆ. ಎಡಿಜಿಪಿ ಮಟ್ಟದ ಉನ್ನತ ಅಧಿಕಾರಿಯಿಂದ ಹಿಡಿದು ವಿವಿಧ ಹಂತದ ಅಧಿಕಾರಿಗಳಿಗೆ ಈ ಗೌರವ ಲಭಿಸಿದೆ. ಅವರೆಲ್ಲರ ಹೆಸರು, ಹುದ್ದೆಯನ್ನು ಪ್ರಕಟಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ(ADGP) ಎಂ.ಚಂದ್ರಶೇಖರ್ ಅವರಿಗೆ ವಿಶಿಷ್ಟ ಸೇವಾ ಪದಕ ನೀಡಲಾಗಿದೆ.
ಕರ್ನಾಟಕ ಲೋಕಾಯುಕ್ತ ಎಸ್ಪಿ(ಬೆಂಗಳೂರು)- ಶ್ರೀನಾಥ ಮಹಾದೇವ ಜೋಶಿ, ಚನ್ನಪಟ್ಟಣ ಉಪ ವಿಭಾಗ, ರಾಮನಗರ ಡಿವೈಎಸ್ಪಿ ಕೆ.ಸಿ ಗಿರಿ, ಚಿಂತಾಮಣಿ ಉಪ ವಿಭಾಗ, ಚಿಕ್ಕಬಳ್ಳಾಪುರ ಡಿವೈಎಸ್ಪಿ ಪಿ.ಮುರುಳೀಧರ್, ಬೆಂಗಳೂರಿನ ಸಂಚಾರ ಯೋಜನೆಯ ಎಸಿಪಿ ಜಿ.ಪ್ರಭಾಕರ್, ಬೆಂಗಳೂರು ಸಿಐಡಿ ಎಸ್ಪಿ ಎಂ.ಡಿ ಶರತ್, ಬೆಂಗಳೂರು ನಗರ ಸಿಎಆರ್ ಪಶ್ಚಿಮ ಡಿಸಿಪಿ ವಿ.ಸಿ ಗೋಪಾಲರೆಡ್ಡಿ, ಮಂಗಳೂರು ನಗರ ಸಿಸಿಆರ್ ಬಿ ಎಸಿಪಿ ರವೀಶ್.ಎಸ್ ನಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು ಸಹಾಯಕ ನಿರ್ದೇಶಕ ಬಸವೇಶ್ವರ, ಕಲಬುರಗಿ ಎಸ್ಐಡಿ ಡಿವೈಎಸ್ಪಿ ಕೆ.ಬಸವರಾಜ, ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ, ಬಳ್ಳಾರಿ ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ.ಬಸರಗಿ, ಹಾಸನ ಸಹಾಯಕ ಕಮಾಂಡೆಂಟ್ ಎಚ್.ಆರ್ ಹರೀಶ್, ಕೆಎಸ್ ಆರ್ ಪಿ ಬೆಂಗಳೂರು ಆರ್ ಪಿಐ ಎಸ್.ಮಂಜುನಾಥ್, ಬೆಂಗಳೂರು ಸಿಐಡಿ ಎಎಸ್ಐ ಗೌರಮ್ಮ, ಉಡುಪಿ ಡಿಸಿಆರ್ ಬಿ, ಸಿಎಚ್ ಸಿ ವಿಜಯಕುಮಾರ್, ದಾವಣಗೆರೆ ಎಫ್ ಪಿಬಿ ಪಿಎಸ್ಐ ಮಂಜುನಾಥ್ ಎಸ್.ಕಲ್ಲೇದೇವರ್ ಸೇರಿ 19 ಅಧಿಕಾರಿಗಳಿಗೆ ರಾಷ್ಟ್ರಪತಿ(president medal)ಪದಕ ಸಂದಿದೆ.