ಪ್ರಜಾಸ್ತ್ರ ಸುದ್ದಿ
ಪತ್ತನಂತಿಟ್ಟ(Pathanamthitta): ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಪ್ರಸಿದ್ಧ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ, ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದರು. ಈ ಮೂಲಕ ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಹಾಗೂ 2ನೇ ರಾಷ್ಟ್ರಪತಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದಂತಾಯಿತು. 1970ರಲ್ಲಿ ಅಂದಿನ ರಾಷ್ಟ್ರಪತಿ ವಿ.ವಿ ಗಿರಿಯವರು ಇಲ್ಲಿಗೆ ಭೇಟಿ ನೀಡಿದ್ದರು.
ಗಣಪತಿ ದೇವಸ್ಥಾನದ ಶಾಂತಿ ವಿಷ್ಣು ನಂಬೂದರಿಯವರು ರಾಷ್ಟ್ರಪತಿಗಳಿಗೆ ಇರುಮುಡಿ ಕಟ್ಟಿದರು. ದೇಗುಲದ ಪಕ್ಕದಲ್ಲಿ ಇಡುಗಾಯಿ ಒಡೆದರು. ಟಿಡಿಬಿ ಅಧ್ಯಕ್ಷ ಪಿ.ಎಸ್ ಪ್ರಶಾಂತ್ ಸ್ವಾಗತಿಸಿದರು. ಗುಡಿಯ ತಂತ್ರಿ ಕಂದರಾರು ಮಹೇಶ ಮೊಹನಾರು ಅವರು ರಾಷ್ಟ್ರಪತಿಗಳಿಗೆ ಪೂರ್ಣಕುಂಭ ಸ್ವಾಗತ ನೀಡಿದರು.