ಪ್ರಜಾಸ್ತ್ರ ಸುದ್ದಿ(Photo- @narendramodi)
ಪ್ರಯಾಗ್ ರಾಜ್(Prayagraj): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಪ್ರಧಾನಿ ಮೋದಿ(Modi) ಭಾಗವಹಿಸಿದ್ದು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಮಾಘ ಅಷ್ಟಮಿ ದಿನದ ಹಿನ್ನಲೆಯಲ್ಲಿ ಇಂದು ಇಲ್ಲಿಗೆ ಭೇಟಿ ಕೊಟ್ಟು ಗಂಗಾ ನದಿಯಲ್ಲಿ ಮಿಂದೆದ್ದರು. ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.
ರುದ್ರಾಕ್ಷಿಮಾಲೆ ಹಿಡಿದು ಗಂಗಾನದಿಯಲ್ಲಿ(Ganga River) ಮಿಂದೆದ್ದು, ಗಂಗಾ ಮಾತೆಗೆ ಹಾಗೂ ಸೂರ್ಯದೇವನಿಗೆ ಆರತಿ ಮಾಡಿದರು. ಹಿಂದೂಗಳ ನಂಬಿಕೆ ಪ್ರಕಾರಣ ಕುಂಭಮೇಳದಲ್ಲಿ ಸ್ನಾನ ಮಾಡುವುದು ವಿಶೇಷ ಹಾಗೂ ಮಹತ್ವದ್ದಾಗಿದೆ. ಇದರಿಂದ ಪಾಪ ಪರಿಹಾರವಾಗುತ್ತೆ ಎನ್ನುವ ನಂಬಿಕೆಯಿದೆ. ಜನವರಿ 13ರಂದು ಪ್ರಾರಂಭವಾಗಿದ್ದು ಫೆಬ್ರವರಿ 26ರ ಮಹಾಶಿವರಾತ್ರಿಯೊಂದಿಗೆ ಮಹಾಕುಂಭ ಮೇಳಕ್ಕೆ ತೆರೆ ಬೀಳಲಿದೆ.