ಪ್ರಜಾಸ್ತ್ರ ಸುದ್ದಿ
ಪಾಲ್ಘರ್(palghar): ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಸ್ಥಾಪಿಸಿದ್ದ 35 ಅಡಿ ಎತ್ತರದ ಶಿವಾಜಿ(Shivaji statue) ಮಹಾರಾಜರ ಪ್ರತಿಮೆ ಇತ್ತೀಚೆಗೆ ಉರುಳಿ ಬಿದ್ದಿದೆ. ಈ ಸಂಬಂಧ ಇಂದು ಪ್ರಧಾನಿ(Modi) ಮೋದಿ ಕ್ಷಮೆ ಕೇಳಿದ್ದಾರೆ. ಪಾಲ್ಘರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ನಮಗೆ ಬರೀ ಹೆಸರು, ರಾಜನಲ್ಲ. ದೇವರು. ಹೀಗಾಗಿ ಶಿರಬಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ರಾಜ್ ಕೋಟ್ ಕೋಟೆಯಲ್ಲಿ ಸ್ಥಾಪಿಸಲಾಗಿದ್ದ 35 ಅಡಿ ಎತ್ತರದ ಪ್ರತಿಮೆ ಕಳೆದ ಆಗಸ್ಟ್ 26ರಂದು ಕುಸಿದು ಬಿದ್ದಿದೆ. ಮಳೆ, ಗಾಳಿಯಿಂದ ಉರುಳಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ. ಕಳಪೆ ಕಾಮಗಾರಿಯಲ್ಲಿ ರಾಜ್ಯ ಸರ್ಕಾರ ಮುಳುಗಿದ ಪರಿಣಾಮ ಪ್ರತಿಮೆ ಉರುಳಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ. ಈ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿವೆ.