ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ, ಅಭಿವೃದ್ಧಿ ಹಾಗೂ ಸ್ವಾವಲಂಬಿಯಾಗಿ ಕೆಲಸ ನಡೆಸುವ ದೃಷ್ಟಿಯಿಂದ ಪರಮ್ ರುದ್ರ ಸೂಪರ್(Param Rudra Super Computing) ಕಂಪ್ಯೂಟರ್ ಅನ್ನು ಪ್ರಧಾನಿ ಮೋದಿ(Modi) ಅವರು ವಿಡಿಯೋ ಕಾನ್ಫ್ ರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ರಾಷ್ಟ್ರೀಯ ಸೂಪರ್ ಕಂಪ್ಯೂಟರ್ ಮಿಷನ್ ಅಡಿಯಲ್ಲಿ 130 ಕೋಟಿ ರೂಪಾಯಿಯಲ್ಲಿ ದೇಶಿಯವಾಗಿ ಅಭಿವೃದ್ಧಿ ಪಡಿಸಿದ ಕಂಪ್ಯೂಟರ್ ಗಳನ್ನು ಗುರುವಾರ ಬಿಡುಗಡೆ ಮಾಡಿದರು.
ದೆಹಲಿ, ಪುಣೆ, ಕೊಲ್ಕತ್ತಾದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅನುಕೂಲವಾಗಿವಂತೆ ಅಳವಡಿಸಲಾಗಿದೆ. ದೆಹಲಿಯ ಇಂಟರ್ ಯೂನಿರ್ವಸಿಟಿ(IUAC) ಆಕ್ಸಿಲರೇಟರ್ ವಸ್ತು ವಿಜ್ಞಾನ, ಪರಮಾಣು ಭೌತಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿದೆ. ಕೋಲ್ಕತ್ತಾದ ಎಸ್.ಎನ್ ಬೋಸ್ ಕೇಂದ್ರವು ಭೌತಶಾಸ್ತ್ರ, ಭೂ ವಿಜ್ಞಾನ, ಬ್ರಹ್ಮಾಂಡಶಾಸ್ತ್ರ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುತ್ತಿದೆ. ಪುಣೆಯ ಜೈಂಟ್ ಮೀಟರ್(GMRT) ರೇಡಿಯೋ ಟೆಲಿಸ್ಕೋಪ್ ಸಂಸ್ಥೆಯು ವೇಗದ ರೇಡಿಯೋ ಬರ್ಸ್ಟ್ ಗಳು ಹಾಗೂ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ಕಂಪ್ಯೂಟರ್ ಬಳಕೆ ಮಾಡಿಕೊಳ್ಳಲಿದೆ.