Ad imageAd image

ಸಿಜೆಐ ಮನೆಯಲ್ಲಿ ಪ್ರಧಾನಿ ಗಣೇಶ ಪೂಜೆ: ಸಂಜಯ್ ರಾವತ್ ಪ್ರಶ್ನೆ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಪೂಜೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

Nagesh Talawar
ಸಿಜೆಐ ಮನೆಯಲ್ಲಿ ಪ್ರಧಾನಿ ಗಣೇಶ ಪೂಜೆ: ಸಂಜಯ್ ರಾವತ್ ಪ್ರಶ್ನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್(DY Chandrachud) ಅವರ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶ ಪೂಜೆಯಲ್ಲಿ ಪ್ರಧಾನಿ ಮೋದಿ(Modi) ಭಾಗವಹಿಸಿದ್ದಾರೆ. ಇದು ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಜಿಐ ನಮ್ಮ ಪಕ್ಷದ ಪ್ರಕರಣದಲ್ಲಿ ನ್ಯಾಯುತವಾಗಿ ತೀರ್ಪು ನೀಡುವವರೆ ಎಂದು ಶಿವಸೇನ(ಯುಬಿಟಿ) ನಾಯಕ(Shiva sena) ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಎಲ್ಲೆಡೆ ಗಣೇಶ ಪೂಜೆ ನಡೆಯುತ್ತಿದೆ. ಜನರು ಪರಸ್ಪರ ಮನೆಗಳಿಗೆ ಭೇಟಿ ನೀಡಿ ಪೂಜೆಯಲ್ಲಿ ಭಾಗವಹಿಸುತ್ತಾರೆ. ಇಲ್ಲಿಯವರೆಗೂ ಪ್ರಧಾನಿ ಮೋದಿ ಎಷ್ಟು ಮನೆಗಳಲ್ಲಿ ಪೂಜೆ ಸಲ್ಲಿಸಿದ್ದಾರೆ ಗೊತ್ತಿಲ್ಲ. ಸಿಜೆಐ(CJI) ಮನೆಗೆ ಭೇಟಿ ನೀಡಿ ಒಟ್ಟಿಗೆ ಆರತಿ ಆಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಪ್ರತಿವಾದಿ ಇದೆ. ಮುಖ್ಯ ನ್ಯಾಯಮೂರ್ತಿಗಳು ಈ ಪ್ರಕರಣದಿಂದ ದೂರವಿರುಬೇಕು. ಯಾಕಂದರೆ ಅವರು ನಮ್ಮ ಪ್ರತಿವಾದಿಯ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ಸಂಜಯ್ ರಾವತ್ ಹೇಳಿದ್ದಾರೆ.

ಸಿಜೆಐ ಮನೆಗೆ ಪ್ರಧಾನಿ ಭೇಟಿಯ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜನ ಸಾಮಾನ್ಯರು ಸಹ ನ್ಯಾಯಾಂಗದ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಶ್ನೆ ಮೂಡುತ್ತಿದ್ದು, ಪ್ರಧಾನಿ ಮೋದಿ ನ್ಯಾಯಾಂಗವನ್ನು ಸಹ ಹಾಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರುತ್ತಿದ್ದಾರೆ.

WhatsApp Group Join Now
Telegram Group Join Now
Share This Article