ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಧ್ಯ ಆಪ್ರಿಕಾದ ಅಂಗೋಲಾದ ಸೇನೆಯ ಆಧುನೀಕರಣಕ್ಕೆ 200 ಮಿಲಿಯನ್ ಡಾಲರ್, ಅಂದರೆ 1,691 ಕೋಟಿ ರೂಪಾಯಿ ರಕ್ಷಣಾ ಸಾಲವನ್ನು(Defence Loan) ಪ್ರಧಾನಿ ಮೋದಿ ಘೋಷಿಸಿದ್ದಾರೆ. ಅಂಗೋಲಾ ಅಧ್ಯಕ್ಷ ಜಾವೊ ಲಾರೆನ್ಸ್ ನಾಲ್ಕು ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದಾರೆ. ಅವರೊಂದಿಗೆ ದ್ವಿಪಕ್ಷೀಯ ಚರ್ಚೆಯ ಬಳಿಕ ಪ್ರಧಾನಿ ಮೋದಿ ಇದನ್ನು ಘೋಷಿಸಿದ್ದಾರೆ.
ರಕ್ಷಣಾ ವಲಯಗಳ ದುರಸ್ತಿ, ಪೂರೈಕೆ, ಪರೀಕ್ಷೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಉಗ್ರರು ಹಾಗೂ ಅವರಿಗೆ ಬೆಂಬಲ ನೀಡುತ್ತಿರುವವರ ವಿರುದ್ಧ ಹೋರಾಡಲು ನಾವು, ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಬದ್ಧರಾಗಿದ್ದೇವೆ ಎಂದಿದ್ದಾರೆ. ಇನ್ನು ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಸಾಮರ್ಥ್ಯದ ಕುರಿತು ಅಂಗೋಲಾದೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.