ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮುಂಗಾರು ಅಧಿವೇಶನ ಆರಂಭಕ್ಕೂ ಮೊದಲು ಮಾಧ್ಯಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಅಧಿವೇಶನ ಸಂಭ್ರಮ ಪಡುವಂತದ್ದಾಗಿದೆ. ಆಪರೇಷನ್ ಸಿಂಧೂರ್, ನಕ್ಸಲ್ ಮುಕ್ತ ನಗರಗಳು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಾರತದ ಧ್ವಜ ಹಾರಾಡಿದೆ. ಕಳೆದೊಂದು ದಶಕದಲ್ಲಿ ದೇಶ ಶಾಂತಿ ಹಾಗೂ ಪ್ರಗತಿಯನ್ನು ಸಾಧಿಸಿದೆ ಎಂದಿದ್ದಾರೆ.
ಕೇವಲ 22 ನಿಮಿಷಗಳಲ್ಲಿ ಉಗ್ರರ ನೆಲೆಗಳನ್ನು ನೆಲಸಮ ಮಾಡಲಾಗಿದೆ. ಈ ಮೂಲಕ ಇಡೀ ಜಗತ್ತಿಗೆ ಭಾರತದ ಮಿಲಿಟರಿ ಶಕ್ತಿ ತೋರಿಸಿದೆ. ಇಂದು ದೇಶದ ಅನೇಕ ಜಿಲ್ಲೆಗಳು ನಕ್ಸಲ್ ಮುಕ್ತವಾಗಿವೆ. ಇಂದು ಹಣದುಬ್ಬರ ದರ ಶೇಕಡ 2ಕ್ಕೆ ಏರಿದೆ. ಹೀಗಾಗಿ ಈ ಅಧಿವೇಶನ ಗೆಲುವನ್ನು ಸಂಭ್ರಮಿಸುವ ಅಧಿವೇಶನದಂತೆ ಭಾಸವಾಗುತ್ತಿದೆ ಅಂತಾ ಹೇಳಿದ್ದಾರೆ.