ಪ್ರಜಾಸ್ತ್ರ ಸುದ್ದಿ
ಕೊಚ್ಚಿ(Kochi): ಕೇರಳದ ಕೊಚ್ಚಿಯಲ್ಲಿ ಬುಧವಾರ ನಡೆದ ಎನ್ ಡಿಎ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯ ಬಿಕ್ಕಟ್ಟಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಯುವರಾಜನಿಗೆ ದೇಶದ ಅಭಿವೃದ್ಧಿಯ ಅರಿವಿಲ್ಲ ಎಂದು ಕಿಡಿ ಕಾರಿದ್ದಾರೆ. ದೇಶದ ಯುವ ಜನರು ಡ್ರೋನ್ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಯುವಕರು ಡ್ರೋನ್ ಗಳನ್ನು ತಯಾರಿಸುತ್ತಿದ್ದಾರೆ ಅನ್ನೋದು ಸಹ ಅವರಿಗೆ ಗೊತ್ತಿಲ್ಲ ಎಂದರು.
ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ. ಅವರ ಬಗ್ಗೆ ಕಾಳಜಿ ವಹಿಸುತ್ತೇವೆ. ಇನ್ನು ಕೇರಳದ ಜನರ ಹಿತದೃಷ್ಟಿಯಿಂದ ಎಲ್ ಡಿಎಫ್ ಹಾಗೂ ಯುಡಿಎಫ್ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ ಪದ್ಧಿಯಾಗಿ ಕೊನೆಯಾಗಬೇಕು. ಮುಂದಿನ ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎಗೆ ಅವಕಾಶ ನೀಡಬೇಕು ಅಂತಾ ಹೇಳಿದರು.




