ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಫ್ರಾನ್ಸ್ ನ ಫ್ಯಾರಿಸ್ ನಲ್ಲಿ ನಡೆದ ಒಲಿಂಪಿಕ್ಸ್-2024 ಟೂರ್ನಿಯಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೀಶಾ ಫೋಗೆಟ್(vinesh phogat) ಅವರು ಫೈನಲ್ ತಲುಪಿದರು. ಆದರೆ, 100 ಗ್ರಾಂ ತೂಕ ಹೆಚ್ಚಿಗೆ ಇದ್ದಿದ್ದರಿಂದ ಅನರ್ಹಗೊಳಿಸಲಾಯಿತು. ಇದು ಎಲ್ಲರಿಗೂ ನೋವಿನ ವಿಚಾರ. ಈ ಬಗ್ಗೆ ಮಾತನಾಡಿರುವ ಪ್ರಧಾನಿ(Modi) ಮೋದಿ, ಒಲಿಪಿಂಕ್ಸ್ ಕ್ರೀಡಾಕೂಟದಲ್ಲಿ ಕುಸ್ತಿಯಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕುಸ್ತಿಪಟು ವಿನೀಶಾ ಫೋಗೆಟ್ ಆಗಿದ್ದಾರೆ. ಆ ಕ್ಷಣ ನಮ್ಮ ಪಾಲಿಗೆ ಹೆಮ್ಮೆಯದಾಗಿದೆ ಎಂದಿದ್ದಾರೆ.
ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನಿವಾಸದಲ್ಲಿ ನಡೆದ ಸಂವಾದದಲ್ಲಿ ಅವರು ಈ ರೀತಿ ಹೇಳಿದ್ದಾರೆ. ಶೂಟಿಂಗ್ ನಲ್ಲಿ ಮನು ಭಾಕರ್ 2 ಕಂಚಿನ ಪದಕ ಗೆದ್ದರು. ಹಾಕಿಯಲ್ಲಿ ಕಂಚಿನ ಪದಕ ಬಂದಿತು. ಜಾವೆಲಿನ್ ನಲ್ಲಿ ಬೆಳ್ಳಿ ಪದಕ ಬಂದಿತು. ಶೂಟಿಂಗ್ ಮಿಶ್ರದಲ್ಲಿ ಸರ್ಬಜೀತ್ ಸಿಂಗ್-ಮನು ಭಾಕರ್ ಗೆ ಕಂಚು ಬಂದಿತು. ಪುರುಷರ ರೈಫಲ್ ಶೂಟಿಂಗ್ ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚು, ಪುರುಷರ ಕುಸ್ತಿಯಲ್ಲಿ ಅಮನ್ ಶೇರಾವತ್ ಕಂಚು ಪದಕ ಪಡೆದಿದ್ದಾರೆ.
50 ಕೆಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿ ಫೈನಲ್ ತಲುಪಿದ ವಿನೀಶಾ ಫೋಗೆಟ್ ಅವರು 100 ಗ್ರಾಂ ತೂಕ ಹೆಚ್ಚಿದ್ದರಿಂದ ಅನರ್ಹಗೊಳಿಸಲಾಯಿತು. ಕ್ರೀಡಾ ಮಧ್ಯಸ್ಥತಿಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅಲ್ಲಿ ಇವರ ಅರ್ಜಿ ತಿರಸ್ಕಾರ ಮಾಡಲಾಯಿತು. ಇದರಿಂದಾಗಿ ಕೊನೆಯ ಪಕ್ಷ ಬೆಳ್ಳಿ ಪದಕ ಬರುವುದು ಕೈತಪ್ಪಿತು. ಒಲಿಂಪಿಕ್ಸ್ ಸಂಸ್ಥೆಯ ನಡೆಯ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಯಿತು. ಫೋಗೆಟ್ ಪರ ಭಾರತದಲ್ಲಿ ದೊಡ್ಡ ಧ್ವನಿ ಎದ್ದಿತು. ಆದರೆ, ಎಲ್ಲರ ನಿರೀಕ್ಷೆ ಸುಳ್ಳಾಯಿತು.