ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್, ಕಳೆದ 11 ವರ್ಷಗಲಿಂದ ವಿಶ್ವಗುರು ನೋಡಿ ಸಾಕಾಗಿದೆ. ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲ. ಮೊದಲು ಪ್ರಧಾನಿ ಮೋದಿ ಕೆಳಗಿಳಿಸಿ ಎನ್ನುವ ಮೂಲಕ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಸಚಿವರು ಅಸಮಾಧಾನಗೊಂಡಿದ್ದಾರೆ. ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಮಾಡಿದರೂ ನಮಗೆ ಅಭ್ಯಂತರವಿಲ್ಲ. ಎನ್ ಡಿಎ ಸರ್ಕಾರದಲ್ಲಿ ಸಂಕಟವಿದೆ. ಬಿಜೆಪಿ ಸಚಿವರು ಪ್ರಧಾನಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಿದ್ದರೂ ಬೇರೆ ನಾಯಕರ ಸಾಧನೆ ಬಗ್ಗೆ ಮಾತನಾಡುವ ಬದಲು ಬರೀ ಮೋದಿ ಸಾಧನೆ ಎನ್ನುತ್ತಾರೆ ಎಂದು ಕಾಲೆಳೆದರು.