ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಂವಿಧಾನದ 51 ಎ ವಿಧಿಯಲ್ಲಿ ಮೂಲಭೂತ ಕರ್ತವ್ಯಗಳ ಕುರಿತು ಮೀಸಲಾದ ಅಧ್ಯಾಯದಲ್ಲಿ ನಮ್ಮ ಕರ್ತವ್ಯಗಳನ್ನು ನೆನಪಿಸುತ್ತದೆ. ಹೀಗಾಗಿ ನಮ್ಮ ಪ್ರತಿಯೊಂದು ಹೆಜ್ಜೆ ಸಂವಿಧಾನ ಬಲಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂವಿಧಾನ ದಿನದ ಹಿನ್ನಲೆಯಲ್ಲಿ ಬಹಿರಂಗ ಪತ್ರದ ಮೂಲಕ ದೇಶದ ಜನತೆಗೆ ಕರೆಯನ್ನು ಕೊಟ್ಟಿದ್ದಾರೆ.
ಸಂವಿಧಾನ ರಚನೆಯಲ್ಲಿ ರಾಜೇಂದ್ರ ಪ್ರಸಾದ್ ಹಾಗೂ ಅಂಬೇಡ್ಕರ್ ಸೇರಿ ಹಲವರ ಕೊಡುಗೆ ಅನನ್ಯ. ಅದೇ ರೀತಿ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ಧಾರ್ ವಲ್ಲಾಭಾಯ್ ಪಟೇಲ್, ಮಹಾತ್ಮ ಗಾಂಧಿ, ಬಿರ್ಸಾ ಮುಂಡಾ ಅವರ ನಾಯಕತ್ವ ಮಹತ್ವದ್ದಾಗಿದೆ. ನಮ್ಮ ಸಂವಿಧಾನದ ಸೃಷ್ಟಿಕರ್ತರು ಕಂಡ ಕನಸುಗಳನ್ನು ನನಸಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವ ಬಲಗೊಳ್ಳಲು ಮತದಾನದಲ್ಲಿ ಎಲ್ಲರೂ ಭಾಗವಹಿಸಬೇಕು. 18 ವರ್ಷ ಪೂರೈಸಿದವರು ಸಂವಿಧಾನ ದಿನವನ್ನು ತಮ್ಮ ಕಾಲೇಜುಗಳಲ್ಲಿ ಆಚರಿಸಿ ಎಂದರು.




