ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಭಾರತ ಹಾಗೂ ಅಮೆರಿಕ ನಡುವೆ ಉತ್ತಮ ಸಂಬಂಧವಿದೆ. ನನಗೂ ಮೋದಿಗೆ ಉತ್ತಮ ಸ್ನೇಹವಿದೆ. ಸ್ವಲ್ಪ ಕಾಯಿರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ ಮಾತನಾಡಿದ್ದು, ಟ್ರಂಪ್ ಅವರ ಭಾವನೆಗಳನ್ನು ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.
ಟ್ರಂಪ್ ಅವರ ಭಾವನೆಗಳು ನಮ್ಮ ಸಂಬಂಧದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಕ್ಕಾಗಿ ಅವರಿಗೆ ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ. ಜಾಗತಿಕ ಕಾರ್ಯತಂತ್ರದ ಭಾಗಿಯತ್ವಕ್ಕಾಗಿ ಸಕಾರಾತ್ಮಕವಾಗಿ ಎದುರು ನೋಡುತ್ತೇನೆ ಎಂದು ಹೇಳಿದ್ದಾರೆ.