Ad imageAd image

ಜಗತ್ತಿನ ಅತೀ ಶ್ರೀಮಂತ ದೊರೆಯೊಂದಿಗೆ ಪ್ರಧಾನಿ ಮಾತುಕತೆ

ಬ್ರೂನೈ ದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬುಧವಾರ ಅಲ್ಲಿನ ದೊರೆ ಹಾಜಿ ಹಸನಲ್ ಬೊಲ್ಕಿಯಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

Nagesh Talawar
ಜಗತ್ತಿನ ಅತೀ ಶ್ರೀಮಂತ ದೊರೆಯೊಂದಿಗೆ ಪ್ರಧಾನಿ ಮಾತುಕತೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬಂದಾರ್ ಸೆರಿ ಬಿಗಾವನ್(Bruei): ಬ್ರೂನೈ ದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ(Modi) ಬುಧವಾರ ಅಲ್ಲಿನ ದೊರೆ ಹಾಜಿ ಹಸನಲ್(haji hassanal bolkiah) ಬೊಲ್ಕಿಯಾ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ದೊರೆ ಹಾಜಿ ಹಸನಲ್ ಬೊಲ್ಕಿಯಾ ಅವರೊಂದಿಗಿನ ಸಭೆ ಖುಷಿ ನೀಡಿದೆ. ನಮ್ಮ ಚರ್ಚೆ ತುಂಬಾ ವಿಶಾಲವಾಗಿದೆ. ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಭಾರತೀಯ ಹೈಕಮಿಷನ್ ಚಾನ್ಸರಿ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ಭಾರತೀಯರೊಂದಿಗೆ ಸಂವಾದ ನಡೆಸಿದರು. ಅಲ್ಲದೆ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದರು.

ಶ್ರೀಮಂತ ದೊರೆ ಎಂದೆ ಹಾಜಿ ಫೇಮಸ್

ಬ್ರೂನೈ ದೊರೆ ಹಾಜಿ ಹಸನಲ್ ಬೊಲ್ಕಿಯಾ ಅವರು ಅತಿ ಶ್ರೀಮಂತ ದೊರೆ ಎಂದೇ ಖ್ಯಾತಿ ಪಡೆದವರು. ಇವರು ಒಟ್ಟು ಆಸ್ತಿ ಮೌಲ್ಯ 30 ಬಿಲಿಯನ್ ಡಾಲರ್. ಅಂದರೆ ಬರೋಬ್ಬರಿ 2.88 ಲಕ್ಷ ಕೋಟಿ ರೂಪಾಯಿ. ಇವರ ಬಳಿ 7 ಸಾವಿರ ಕಾರುಗಳಿವೆ. ಅತಿ ದುಬಾರಿಯಾದ ರೋಲ್ಸ್ ರಾಯ್ 600 ಕಾರು, 300 ಫೆರಾರಿ ಕಾರುಗಳಿವೆ. 3 ಸಾವಿರ ಕೋಟಿ ಮೌಲ್ಯದ ಬೋಯಿಂಗ್ ವಿಮಾನವಿದೆ. 20 ಲಕ್ಷ ಚದರ ಅಡಿಯಲ್ಲಿರುವ ಇಸ್ತಾನ್ ನೂರುಲ್ ಇಮಾಮ್ ಎನ್ನುವ ಬೃಹತ್ ಅರಮನೆ ಮೌಲ್ಯ 2,250 ಕೋಟಿ ರೂಪಾಯಿ. ಇಲ್ಲಿ 1,700 ರೂಂಗಳಿವೆ. 257 ಬಾತ್ ರೂಂಗಳಿವೆ. 5 ಸ್ವೀಮ್ಮಿಂಗ್ ಪೂಲ್ ಗಳಿವೆ. ಅರಮನೆ ಮೇಲಿನ ಗುಮ್ಮಟಕ್ಕೆ ಬಂಗಾರದ ಲೇಪನವಿದೆ. 78 ವರ್ಷದ ದೊರೆ ಹಾಜಿ 21ನೇ ವಯಸ್ಸಿಗೆ ಅಂದರೆ 1967ರಲ್ಲಿ ಬೂನ್ರೈ ರಾಜನಾಗಿದ್ದಾರೆ.

WhatsApp Group Join Now
Telegram Group Join Now
Share This Article