ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು(Cyber Crime) ಹೆಚ್ಚಾಗುತ್ತಿವೆ. ಆನ್ಲೈನ್ ಮೂಲಕ ಡಿಜಿಟಲ್ ಬಂಧನ ಮಾಡಲಾಗುತ್ತಿದೆ. ಗುಮ್ಮಟನಗರಿ ವಿಜಯಪುರದಲ್ಲಿ ಇಂತಹದೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬರಿಗೆ ಮುಂಬೈ ಮೂಲದ ವಂಚಕರು ಆಧಾರ್ ಕಾರ್ಡ್ ತೋರಿಸುವಂತೆ ಹೇಳಿ ವಂಚಿಸಿದ್ದಾರೆ. ಈ ಕುರಿತು ಭಾನುವಾರದ ಮನ್ ಕೀ ಬಾತ್(Mann ki Baat) ನಲ್ಲಿ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದಾರೆ. ಸೈಬರ್ ಅಪರಾಧದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ.
ಡಿಜಿಟಲ್(Digital Arrest) ಬಂಧನದಂತಹ ವಂಚನೆಗಳನ್ನು ಮಟ್ಟ ಹಾಕಲು ರಾಜ್ಯ ಸರ್ಕಾರಗಳು ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೋ ಆರ್ಡಿನೇಷನ್ ಸೆಂಟರ್ ಸ್ಥಾಪಿಸಲಾಗಿದೆ. ಕಾನೂನಿನಲ್ಲಿ ಡಿಜಿಟಲ್ ಬಂಧನದ ವ್ಯವಸ್ಥೆ ಇಲ್ಲ. ಇದೆಲ್ಲ ಮೋಸ, ವಂಚನೆ. ಸಮಾಜ ಘಾತುಕ ಶಕ್ತಿಗಳು ಈ ರೀತಿ ಮಾಡುತ್ತಿವೆ. ಇದನ್ನು ಪತ್ತೆ ಹಚ್ಚಲು ವಿವಿಧ ತನಿಖಾ ಸಂಸ್ಥೆಗಳ ಸಹಾಯ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಏಜೆನ್ಸಿಗಳ ನಡುವೆ ಸಮನ್ವಯ ಸಾಧಿಸಲು ರಾಷ್ಟ್ರೀಯ ಕೋ ಆರ್ಡನೇಷನ್ ಸೆಂಟರ್ ಸ್ಥಾಪಿಸಲಾಗಿದೆ ಅಂತಾ ಪ್ರಧಾನಿ ಮೋದಿ(Modi) ತಿಳಿಸಿದ್ದಾರೆ.