ಪ್ರಜಾಸ್ತ್ರ ಸುದ್ದಿ
ತುಮಕೂರು(Tumakoru): ವಿದ್ಯೆ ಕಲಿಸುವ ಗುರು ಕಾಮಪಿಶಾಚಿಯಂತೆ ವರ್ತಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಕೊಡ್ತೀನಿ ಮಂಚಕ್ಕೆ ಬಾ ಎಂದು ಮೆಸೇಜ್ ಕಳಿಸಿದ ಕಾಲೇಜುವೊಂದರ ಪ್ರಾಂಶುಪಾಲನನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರದಲ್ಲಿರುವ ಖಾಸಗಿ ಕಾಲೇಜಿನ ಪ್ರಿನ್ಸಿಪಲ್ ಯೋಗೇಶ್ ಬಂಧಿತ ಆರೋಪಿಯಾಗಿದ್ದಾನೆ.
ವಿದ್ಯಾರ್ಥಿನಿ ಕಾಲೇಜಿನಲ್ಲಿ ಇದ್ದಾಗ ಕೆಟ್ಟದಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆಕೆ ಅವನ ನಂಬರ್ ಬ್ಲಾಕ್ ಲಿಸ್ಟ್ ಗೆ ಹಾಕಿದ್ದಾಳೆ. ಮುಂದೆ ಓದು ಮುಗಿಸಿಕೊಂಡು ಹೋಗಿದ್ದಾಳೆ. ಹೀಗಾಗಿ ಒಂದು ವರ್ಷ ಸುಮ್ಮನಿದ್ದ. ಕಳೆದ ಜೂನ್ 22ರಂದು ಆಕೆಯನ್ನು ರಸ್ತೆಯಲ್ಲಿ ನೋಡಿದ್ದಾನೆ. ಮತ್ತೊಂದು ನಂಬರ್ ಮೂಲಕ ಆಕೆಗೆ ಮೆಸೇಜ್ ಮಾಡಲು ಶುರು ಮಾಡಿದ್ದಾನೆ. ನೀನು ಬೇಕೇಬೇಕು. 10 ಸಾವಿರ ರೂಪಾಯಿ ಕೊಡುತ್ತೇನೆ ಎಂದು ಹೇಳಿದ್ದಾನೆ.
ಕಾಮುಕ ಪ್ರಿನ್ಸಿಪಲ್ ಕಾಟ ತಾಳಲಾರದೆ ವಿದ್ಯಾರ್ಥಿನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಯೋಗೇಶನನ್ನು ಬಂಧಿಸಿದ್ದಾರೆ. ಈ ಹಿಂದೆ ಬಾರ್ ಲೈನ್ ರಸ್ತೆಯಲ್ಲಿರುವ ಕಾಲೇಜುವೊಂದರಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದನಂತೆ.