Ad imageAd image

ಕೈದಿಗಳನ್ನು ಏಕರೂಪವಾಗಿ ನೋಡಬೇಕು, ಜಾತಿ ಆಧಾರಿತವಲ್ಲ: ಸುಪ್ರೀಂ ಕೋರ್ಟ್

ದೇಶದ ಅನೇಕನ ರಾಜ್ಯಗಳಲ್ಲಿನ ಜೈಲುಗಳಲ್ಲಿ ಜಾತಿ ಆಧರಿತ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.

Nagesh Talawar
ಕೈದಿಗಳನ್ನು ಏಕರೂಪವಾಗಿ ನೋಡಬೇಕು, ಜಾತಿ ಆಧಾರಿತವಲ್ಲ: ಸುಪ್ರೀಂ ಕೋರ್ಟ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ದೇಶದ ಅನೇಕನ ರಾಜ್ಯಗಳಲ್ಲಿನ ಜೈಲುಗಳಲ್ಲಿ ಜಾತಿ(Caste Based) ಆಧರಿತ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಎಲ್ಲ ಕೈದಿಗಳನ್ನು ಏಕರೂಪವಾಗಿ ಹಾಗೂ ಮಾನವೀಯ ನೆಲೆಯಲ್ಲಿ ನೋಡಬೇಕು ಎಂದು ತೀರ್ಪು ನೀಡಿದೆ. ಉತ್ತರ(Uttara Pradesh) ಪ್ರದೇಶ ಹಾಗೂ ಪಶ್ಚಿಮ(West Bangala) ಬಂಗಾಳದಂತ ರಾಜ್ಯಗಳಲ್ಲಿನ ಜೈಲುಗಳಲ್ಲಿರುವ ಕೈದಿಗಳಲ್ಲಿ ಜಾತಿ ಆಧಾರಿತ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಕನ್ಯ ಶಾಂತ ಎಂಬುವರು ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ(CJI) ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜೆ.ಬಿ ಪಾರ್ದೀವಾಲಾ ಅವರಿದ್ದ ಪೀಠ ಜೈಲು ನಿಯಮಗಳ ಪ್ರಕಾರ ಕೆಳಸಮುದಾಯದ ಕೈದಿಗಳಿಗೆ ಜಾತಿ ಆಧಾರತದಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದೆ. ಅರ್ಜಿದಾರರು ದೂರಿನಲ್ಲಿ ಕೆಳವರ್ಗದ ಕೈದಿಗಳು(Prisoners) ಕಸ ಗುಡಿಸುವುದು ಸೇರಿ ಇತರೆ ಕೆಲಸ ಮಾಡುವುದು, ಮೇಲ್ವರ್ಗದ ಕೈದಿಗಳು ಅಡುಗೆ ಮಾಡುವುದು ಸೇರಿ ಬೇರೆ ಕೆಲಸ ಮಾಡುವುದು. ಹೀಗಾಗಿ ಜಾತಿ ಆಧರಿತವಾಗಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Share This Article