ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಬೆಂಗಳೂರಿನಿಂದ ಕಾರವಾರಕ್ಕೆ ಹೊರಟಿದ್ದ ಖಾಸಗಿ ಬಸ್ ವೊಂದು ಹಾವೇರಿಯ ಮೋಟೆಬೆನ್ನೂರು ಹತ್ತಿರ ಪಲ್ಟಿಯಾಗಿದೆ. ಇದರಿಂದಾಗಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕೆಎ 01, ಎಸ್ 9746 ನಂಬರ್ ನ ಖಾಸಗಿ ಬಸ್ ಪಲ್ಟಿಯಾಗಿದೆ. ಇದರಲ್ಲಿ 22 ಪ್ರಯಾಣಿಕರಿದ್ದರು. ಬಸ್ಸಿನಿಂದ ಒಬ್ಬೊಬ್ಬರು ಹೊರಗೆ ಬಂದಿದ್ದಾರೆ. ಕೆಲವರು ಸಿಲುಕಿಕೊಂಡಿದ್ದು, ಸ್ಥಳೀಯರು, ಸಹ ಪ್ರಯಾಣಿಕರು ಅವರನ್ನು ಹೊರಗೆ ತರಲು ಹರಸಾಹಸ ಪಟ್ಟರು. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.




