ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಗ್ರಾಮ ಪಂಚಾಯ್ತಿಯಲ್ಲಿ(grama panchayati) ಬರುತ್ತಿದ್ದ ಈ ಹಿಂದೆ ತೆರಿಗೆ ಪಾವತಿಸದೆ ಇದ್ದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹ ಸುಧಾರಣೆಯಾಗಿದೆ. ಗ್ರಾಮೀಣ ಭಾಗದಲ್ಲಿ ತೆರಿಗೆ ವಸೂಲಿ ಪ್ರಮಾಣ ಶೇಕಡ 58ರಷ್ಟು ಆಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್(priyank kharge) ಖರ್ಗೆ ಸೋಮವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೆರಿಗೆಯನ್ನು ಆನ್ಲೈನ್ ಮೂಲಕ ಪಾವತಿಸಲು ಪಿಒಎಸ್ ಸಾಧನ ನೀಡಲಾಗುತ್ತಿದೆ. ಶೇಕಡ 50ರಷ್ಟು ಆಸ್ತಿಗಳನ್ನು ತೆರಿಗೆ(Tax) ವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹ ಸುಧಾರಣೆಯಾಗುತ್ತಿದೆ ಎಂದರು. ಇದೇ ವೇಳೆ ಸಚಿವ ಎಂ.ಬಿ ಪಾಟೀಲರು ಹೇಳಿರುವ ಸಿಎಂ ಸ್ಥಾನದ ಬಗ್ಗೆ ಮಾತನಾಡಿ, ಅವರು ಹೇಳಿದ ಪೂರ್ತಿ ವಿಚಾರ ಹೇಳದೆ. ಒಂದು ಎಳೆ ಇಟ್ಟುಕೊಂಡು ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಸಿಎಂ ಕುರ್ಚಿ ಈಗ ಖಾಲಿ ಇಲ್ಲ. ಮುಂದೆ ಸಿಎಂ ಆಗುವ ಆಕಾಂಕ್ಷಿ ಎಂದಿದ್ದಾರೆ ಅಂತಾ ಹೇಳಿದರು.