Ad imageAd image

ಸರ್ಕಾರ ಭಯ ಬಿದ್ದಂತೆ ವರ್ತಿಸುತ್ತಿದೆ: ಪ್ರಿಯಾಂಕಾ ಗಾಂಧಿ

Nagesh Talawar
ಸರ್ಕಾರ ಭಯ ಬಿದ್ದಂತೆ ವರ್ತಿಸುತ್ತಿದೆ: ಪ್ರಿಯಾಂಕಾ ಗಾಂಧಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಪ್ರಜಾಪ್ರಭುತ್ವದಲ್ಲಿ ಸಂಸತ್ ಅನ್ನೋದು ಮಂದಿರವಿದ್ದಂತೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆಡಳಿತ ಪಕ್ಷದವರು ತಮ್ಮ ಭಾಷಣದಲ್ಲಿ ಪುಸ್ತಕ, ಪತ್ರಿಕೆ, ನಿಯತಕಾಲಿಕೆಗಳ ಕುರಿತು ಉಲ್ಲೇಖಿಸುತ್ತಾರೆ. ವಿಪಕ್ಷಗಳ ಸದಸ್ಯರು ಉಲ್ಲೇಖಿಸಲು ಅವಕಾಶ ನೀಡುವುದಿಲ್ಲವೆಂದರೆ ಹೇಗೆ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ವಿಪಕ್ಷಗಳ 8 ಸದಸ್ಯರನ್ನು ಅಮಾನತುಗೊಳಿಸಿರುವ ನಡೆಯನ್ನು ಖಂಡಿಸಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಚೀನಾ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಪಾಕಿಸ್ತಾನ ಹಾಗೂ ವಿದೇಶಾಂಗ ವ್ಯವಹಾರಗಳ ಕುರಿತಂತೆ ಮಾತನಾಡುತ್ತಿಲ್ಲ. ವಿಪಕ್ಷ ನಾಯಕರು ಮಾತನಾಡಿದರೆ ಅವಕಾಶ ನೀಡುವುದಿಲ್ಲ. ಭಯ ಬಿದ್ದವರಂತೆ ವರ್ತಿಸುತ್ತಿದ್ದಾರೆ. ಪ್ರಕಟವಾಗಿರುವುದನ್ನು ಕೋಟ್ ಮಾಡಿದ್ದಾರೆ. ಸಂಸತ್ ಅನ್ನೋದು ಲೋಕತಂತ್ರದ ಮಂದಿರ. ಇದು ಇಡೀ ದೇಶದ ಆಸ್ತಿ. ಏನಿದೆಯೋ ಅದರ ಬಗ್ಗೆ ಚರ್ಚೆ ಆಗುತ್ತೆ. ತುರ್ತು ಸಂದರ್ಭದಲ್ಲಿ ಏನಾಗಿದೆ ಅನ್ನೋದರ ಬಗ್ಗೆ ಬರೆಯಲಾಗಿದೆ. ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ಏನು ಮಾಡಿದರು. ಏನು ಮಾಡಬೇಕಿತ್ತು ಅನ್ನೋದು ಹೇಳಲಾಗಿದೆ. ಇದ್ಯಾವುದರ ಬಗ್ಗೆ ಚರ್ಚೆ ನಡೆಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Share This Article