ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ವಾಯನಾಡು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ಸದನದಲ್ಲಿ ಮೊದಲ ಬಾರಿಗೆ ಮಾತನಾಡಿದರು. ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ದೇಶದ ಜನರಿಂದ ಸಂವಿಧಾನ ರಕ್ಷಣೆಯಾಗುತ್ತಿದೆ. ಆದರೆ, ಅದನ್ನು ಒಡೆಯುವ ಕೆಲಸವನ್ನು ಆಡಳಿತ ಪಕ್ಷದವರು ಮಾಡುತ್ತಿದ್ದಾರೆ. ಬಡವರ ಬಗ್ಗೆ ಮಾತನಾಡ್ತಾರೆ. ರೈತರ ಬಗ್ಗೆ ಮಾತನಾಡುತ್ತಾರೆ. ರಾಜಕೀಯ ಬಗ್ಗೆ ಮಾತನಾಡುತ್ತಾರೆ. ಆದರೆ, ಮಂಗಲಸೂತ್ರವನ್ನು ರಾಜಕೀಯ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದಲ್ಲಿ ಏನು ಮಾಡಿದರು, ಗೋವಾದಲ್ಲಿ ಏನು ಮಾಡಿದರು, ಹಿಮಾಚಲ ಪ್ರದೇಶದಲ್ಲಿ ಮಾಡಿದರು ಎಂದು ಪ್ರಶ್ನಿಸಿದರು. ಒಂದು ಕಡೆ ಹೊಲಸು ಮಾಡುವುದು, ಮತ್ತೊಂದು ಕಡೆ ಸ್ವಚ್ಛ ಮಾಡುವುದನ್ನು ಮಾಡುತ್ತಾರೆ. ನೆಹರು ಅದು ಮಾಡಿದರು. ಇದು ಮಾಡಿದರು ಅಂತಾರೆ. ನೀವೇನು ಮಾಡಿದೀರಿ ಹೇಳ್ರಿ. ಅವರು ಐಐಟಿ, ಐಟಿಐ, ರೈಲ್ವೆ, ಐಐಎಂ, ತೈಲ, ಎಚ್ಎಎಲ್, ಬಿಎಚ್ಇಎಲ್ ಸ್ಥಾಪಿಸಿದರು. ಇಂದಿರಾ ಗಾಂಧಿಯವರು ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಿದರು. ಬಡವರ ಉದ್ಯೋಗ, ಆಹಾರ ನೀಡಿದರು. 70 ವರ್ಷದ ಬಗ್ಗೆ ಮಾತನಾಡುವ ನೀವು, ವಾಸ್ತವದ ಬಗ್ಗೆ ಮಾತನಾಡಿ ಎಂದು ಕಿಡಿ ಕಾರಿದರು.
ಜನರ ಸ್ಥಿತಿಗತಿ ತಿಳಿಯಲು ಜಾತಿಗಣತಿ ಅವಶ್ಯಕವಾಗಿದೆ. ಬಡವರು ಇನ್ನು ಸಂಕಷ್ಟದಲ್ಲಿಯೇ ಇದ್ದಾರೆ. ನಿರುದ್ಯೋಗ, ಹಣದುಬ್ಬರ ಹೆಚ್ಚಾಗುತ್ತಿದೆ. ಯಾರ ಯಾರ ಮೇಲೆ ಸಿಬಿಐ, ಇಡಿ, ಐಟಿ ಮೂಲಕ ದಾಳಿ ಮಾಡಿಸಿ ಜೈಲಿಗೆ ಹಾಕುವ ಕೆಲಸ ಮಾಡುತ್ತಾರೆ. ದೇಶದ್ರೋಹಿ ಪ್ರಕರಣ ದಾಖಲಿಸಿ ಜೈಲಿಗೆ ಹಾಕುತ್ತಾರೆ. ಮಾಧ್ಯಮಗಳ ಮೂಲಕ ವಿವಿಧ ಆರೋಪಗಳನ್ನು ಮಾಡುತ್ತಾರೆ. ಗಾಂಧಿ ವಿಚಾರಧಾರೆಯ ಹೋರಾಟ ಬೇಕಿದೆ. ಆದರೆ, ಚರ್ಚೆಗೆ ಹೆದರುತ್ತಾರೆ. ಆಲೋಚನೆಗೆ ಗಾಬರಿಯಾಗುತ್ತಾರೆ. ನಾವೆಲ್ಲ ಕಥೆಯೊಂದನ್ನು ಕೇಳಿದ್ದೇವೆ. ತನ್ನ ಬಗ್ಗೆ ಜನರು ಏನು ಹೇಳುತ್ತಾರೆ ಎಂದು ರಾಜ ಬೀದಿಯಲ್ಲಿ ಹೋದ ಕಥೆ. ಈಗನ ರಾಜ ದೇಶ ಬದಲಾಯಿಸಲು ಹೊರಟ್ಟಿದ್ದಾರೆ. ಆದರೆ, ಜನರ ನಡುವೆ ಹೋಗುವ ಧೈರ್ಯವಿಲ್ಲ ಎಂದು ಪ್ರಧಾನಿ ಮೋದಿ ಕಾಲೆಳೆದರು.