ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಇತ್ತೀಚಿನ ದಿನಗಳಲ್ಲಿ ಬಹುಬೇಗ ಹೆಚ್ಚು ಹಣ ಗಳಿಸುವ ಹಿಂದೆ ಬಿದ್ದಿರುವ ಜನರು ಮೋಸ ಹೋಗುತ್ತಿದ್ದರೂ ಮತ್ತೆ ಮತ್ತೆ ಮೋಸದ ಜಾಲಕ್ಕೆ ಬೀಳುತ್ತಿದ್ದಾರೆ. ಇಂತಹ ಮೋಸದ ಆನ್ಲೈನ(Online) ಹೂಡಿಕೆ ಜಾಲಕ್ಕೆ ಸಿಕ್ಕಿಬಿದ್ದ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ. ಮಾಗಡಿ ತಾಲೂಕಿನ ಪ್ರಾಧ್ಯಾಪಕರೊಬ್ಬರ ಮೊಬೈಲ್ ಗೆ ಅಪರಿಚಿತ ನಂಬರ್ ನಿಂದ ಮೆಸೇಜ್ ಬಂದಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಹೆಸರಿನಲ್ಲಿ ನಕಲಿ ಮೆಸೇಜ್ ಬಂದಿದೆ. ಆ ಲಿಂಕ್ ಕ್ಲಿಕ್ ಮಾಡಿದ್ದಾರೆ.
ಆನ್ಲೈನ್ ಬ್ಲಾಕ್ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡಿದರೆ ಶೇಕಡ 5ರಿಂದ 6ರಷ್ಟು ಲಾಭ ಮಾಡಬಹುದು ಎಂದು ಹೇಳಲಾಗಿದೆ. ಇದನ್ನು ನಂಬಿ ಅವರು ಕಳಿಸಿದ ಅರ್ಜಿ ತುಂಬಿದ್ದಾರೆ. ಅದರಲ್ಲಿ ಬ್ಯಾಂಕ್ ವಿವರಗಳನ್ನು ನೀಡಿದ್ದಾರೆ. ನಂತರ ಜುಲೈ 4ರಿಂದ ಆಗಸ್ಟ್ 6ರ ತನಕ ಹಂತ ಹಂತವಾಗಿ ವಿವಿಧ ಬ್ಯಾಂಕ್ ಅಕೌಂಟ್ ಗಳಿಗೆ ಬರೋಬ್ಬರಿ 12 ಲಕ್ಷದ 69 ಸಾವಿರದ 101 ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಡಬಲ್ ಹಣ ಇರಲಿ ಹಾಕಿದ ಹಣವೂ ಗುಳಂ ಆಗಿದೆ. ಹಣ ಕಳೆದುಕೊಂಡ ಪ್ರಾಧ್ಯಾಪಕ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.