ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕೆಲಸದ ನೆಪದಲ್ಲಿ ಉತ್ತರ ಕರ್ನಾಟಕ ಭಾಗದ ಹೆಣ್ಮಕ್ಕಳನ್ನು ನಂಬಿಸಿ ನಂತರ ಅವರನ್ನು ವೇಶ್ಯಾವಾಟಿಕೆ(Prostitution) ದಂಧೆಯಲ್ಲಿ ಬಳಸಿಕೊಳ್ಳುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಾರಿಜಾತ ಹಾಗೂ ಪ್ರಕಾಶ್ ಎನ್ನುವ ಇಬ್ಬರು ಕಿರಾತಕ ದಂಪತಿಯನ್ನು ಸಿಸಿಬಿಯ(CCB) ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ.
ಈ ನೀಚರು ಉತ್ತರ ಕರ್ನಾಟಕ ಭಾಗದ ಬಡ ಹೆಣ್ಮಕ್ಕಳನ್ನು ಈವೆಂಟ್ ಮ್ಯಾನೇಜ್ ಮೆಂಟ್(Event Management) ಹೆಸರಿನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ನಂತರ ಅವರನ್ನು ಕೆಲಸದ ಹೆಸರಿನಲ್ಲಿ ತಮಿಳುನಾಡು, ಪುದುಚೇರಿಯ ರೆಸಾರ್ಟ್ ಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರನ್ನು ಉದ್ಯಮಿಗಳು, ಶ್ರೀಮಂತರಿಗೆ 25 ಸಾವಿರದಿಂದ 50 ಸಾವಿರ ರೂಪಾಯಿಗೆ ಪೂರೈಕೆ ಮಾಡುತ್ತಿದ್ದರು. ಇದೇ ರೀತಿ ಬೆಂಗಳೂರಿನಿಂದ ಯುವತಿಯರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಬಂಧಿಸಲಾಗಿದೆ. ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ.