ಪ್ರಜಾಸ್ತ್ರ ಸುದ್ದಿ
ರಾಂಚಿ(Ranchi): ಜಾರ್ಖಂಡ್ ನ ರಾಂಚಿಯಿಂದ ವಾಸ್ಕೊ-ಡ-ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲಿನ ಮೂಲಕ ಗೋವಾಗೆ ಕಳ್ಳಸಾಗಾಣೆಯಾಗುತ್ತಿದ್ದ 13 ಮಕ್ಕಳನ್ನು ರಕ್ಷಿಸಲಾಗಿದೆ. ರಾಂಚಿಯ ಮೂಚಿ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳದ ಪೊಲೀಸರು ಮಕ್ಕಳನ್ನು ರಕ್ಷಿಸಿದ್ದಾರೆ. ಸ್ಥಳೀಯ ಮಕ್ಕಳ ರಕ್ಷಣಾ ಘಟಕದಲ್ಲಿ ಇರಿಸಲಾಗಿದೆ.
ಮಕ್ಕಳ ಕಳ್ಳಸಾಗಣೆ ಬಗ್ಗೆ ಅನುಮಾನ ಬಂದು ರೈಲಿನ ಬೋಗಿ ಪರಿಶೀನೆ ನಡೆಸಿದಾಗ, 13 ಮಕ್ಕಳು ಕಂಡು ಬಂದಿದ್ದಾರೆ. ಅವರನ್ನು ಪೊಲೀಸರು ವಿಚಾರಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಗೋವಾಕ್ಕೆ ಹೋಗುತ್ತಿದ್ದೇವೆ. ಅಲ್ಲಿ ಒಬ್ಬ ವ್ಯಕ್ತಿ ನಮಗೆ ಕೆಲಸ ಕೊಡಿಸುತ್ತೇನೆ ಎಂದಿದ್ದಾನೆ. ಇದಷ್ಟೇ ನಮಗೆ ಗೊತ್ತು ಎಂದಿದ್ದಾರಂತೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.