Ad imageAd image

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

ಕೋಲ್ಕತ್ತಾದ ಆರ್.ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಘಟನೆ ಖಂಡಿಸಿ

Nagesh Talawar
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕೋಲ್ಕತ್ತಾದ ಆರ್.ಜಿ ಕಾರ್ (R G KAR Medical College and Hospital) ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ(Rape and Murder) ಕೊಲೆ ಘಟನೆ ಖಂಡಿಸಿ ಪಟ್ಟಣದಲ್ಲಿ ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದರು. ತಾಲೂಕು ಆಡಳಿತ ಕಚೇರಿ ಮುಂಭಾಗದಲ್ಲಿ ಭಾರತೀಯ(IMA) ವೈದ್ಯಕೀಯ ಸಂಘದ ಸಿಂದಗಿ ಘಟಕದ ನೇತೃತ್ವದಲ್ಲಿ, ಎಎಫ್ಐ, ಐಡಿಎ, ಆಯುಷ್ಮಾನ್ ಸೇರಿ ವಿವಿಧ ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ವೈದ್ಯರು ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿದರು.

ಈ ವೇಳೆ ಮಾತನಾಡಿದ ಐಎಂಎ ತಾಲೂಕಾಧ್ಯಕ್ಷ ಡಾ.ಗಿರೀಶ ಕುಲಕರ್ಣಿ, ವೈದ್ಯರ(doctors) ಮೇಲೆ ನಡೆಯುವ ಹಲ್ಲೆಗಳು, ದೌರ್ಜನ್ಯಗಳು ನಗಣ್ಯವಾಗಿವೆ. ಮನುಷ್ಯ ಯಾವ ಮಟ್ಟದಲ್ಲಿ ಪೈಶಾಚಿತನಕ್ಕೆ ಇಳಿದಿದ್ದಾನೆ ಎನ್ನುವುದರ ಪ್ರತಿಬಿಂಬ ಕೋಲ್ಕತ್ತಾದ ಆರ್.ಜಿ ಕಾರ್ ವೈದ್ಯಕೀಯ ಕಾಲೇಜಿನಲ್ಲಿ ಡಾ.ಮೂಮಿತಾ ದೇವನಾಥ್ ಇವರ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಸಾಕ್ಷಿ ಎಂದರು. ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಘಟನೆ ಇದು. ಇದನ್ನು ಮುಚ್ಚಿ ಹಾಕುವ ಕೆಲಸ ನಡೆದಿದೆ. ಮೊದಲು ಆತ್ಮಹತ್ಯೆ ಎನ್ನಲಾಯಿತು. ಹೆತ್ತವರಿಗೆ ಮಗಳ ಮುಖ ನೋಡಲು ಎರಡ್ಮೂರು ಗಂಟೆ ಬಿಡಲಿಲ್ಲ. ಕೃತ್ಯ ನಡೆದ ಸ್ಥಳ ಶೀಥಿಲಗೊಂಡಿದೆ ಎಂದು ಈಗ ನವೀಕರಣಗೊಳಿಸಲು ಮುಂದಾಗಿದ್ದು ಯಾರನ್ನೋ ರಕ್ಷಿಸಲು ಇದು ನಡೆದಿದೆ ಎನ್ನುವ ಅನುಮಾನ ಮೂಡಿದೆ. ಘಟನೆ ಖಂಡಿಸಿ ದೇಶ್ಯಾದ್ಯಂತ ಒಂದು ದಿನ ವೈದ್ಯರ ಸೇವೆ ಸ್ಥಗಿತಗೊಳಿಸಿದ್ದೇವೆ ಎಂದರು.

ಡಾ.ಶಾರಧಾ ನಾಡಗೌಡ ಮಾತನಾಡಿ, ವೈದ್ಯರಿಂದ ಪ್ರತಿಭಟನೆ ಎನ್ನುವುದು ಮನಸ್ಸಿಗೆ ಖೇದವೆನಿಸುತ್ತದೆ. ನಾವು ರೋಗಿಗಳ ಸೇವೆ ಮಾಡಿಕೊಂಡು ಇರುವವರು. ವೈದ್ಯರು ಬೀದಿಗೆ ಬರಬೇಕು ಅಂದರೆ ದುರದುಷ್ಟಕರ ಸಂಗತಿ. ನಮ್ಮ ನೋವನ್ನು ವ್ಯಕ್ತಪಡಿಸಲು ಆಗದಷ್ಟು ಸಂಕಟವಿದೆ. ನಾವು ಸರ್ಕಾರಿ ಕಾಲೇಜು, ಆಸ್ಪತ್ರೆಯಲ್ಲಿಯೇ ಹಗಲು, ರಾತ್ರಿ ಕೆಲಸ ಮಾಡಿದ್ದೇವೆ. ಆಗ ಅಷ್ಟೊಂದು ಭದ್ರತೆಯಿತ್ತು. ಯಾವಾಗ ಇದೆಲ್ಲ ಆಗುತ್ತಿದೆ ಎನ್ನುವುದು ಗೊತ್ತಾಗದಂತಾಗಿದೆ. ಇದನ್ನು ಬರೀ ವೈದ್ಯರು ಮಾತ್ರವಲ್ಲ. ಮನುಷ್ಯತ್ವ ಇರುವ ಪ್ರತಿಯೊಬ್ಬರು ಖಂಡಿಸಬೇಕು ಎಂದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ಪ್ರಧಾನಿಯವರಿಗೆ(PM) ಮನವಿ ಸಲ್ಲಿಸಲಾಯಿತು.

ಈ ವೇಳೆ ವೈದ್ಯರಾದ ಮಹೇಶ ಕುಲಕರ್ಣಿ, ಸುನೀಲ ಪಾಟೀಲ, ಸಿ.ಸಿ ಹಿರೇಗೌಡ, ಅನಿಲ ಹೂಗಾರ, ಅಬು, ಪ್ರಭಾಕರ ನಾಯ್ಕ, ಸಂಗಮೇಶ ಪಾಟೀಲ, ಸರೋಜಿನಿ ಕುಲಕರ್ಣಿ, ಶೈಲಜಾ ಕುರುಡೆ,  ಸೀಮಾ ವಾರದ, ಶಮಿತಾ, ಎಂ.ಎ ಹಿರೇಮಠ, ವಿಶ್ವನಾಥ, ಇಸ್ಮಾಯಿಲ್ ಮೊಗಲಾಯಿ, ಇಲಿಯಾಸ್, ಇಲಿಯಾಸ್ ಜಾಲಗೇರಿ, ವಿಶ್ವರಾಧ್ಯ ಲೋಣಿ, ಶಕೀಲ್ ಅತ್ತಾರ, ಶಿವಾನಂದ ಹಿರೇಮಠ, ಶಿವಾನಂದ ಹೊಸಮನಿ, ಚಿದಾನಂದ ಅರಳಗುಂಡಗಿ, ಪ್ರಶಾಂತ ಬಮ್ಮಣ್ಣಿ, ಶಿವಶರಣ ಚೌರ, ಸಮರ್ಥ ಪೂಜಾರ ಸೇರಿದಂತೆ ತಾಲೂಕಿನ ಅನೇಕ ವೈದ್ಯರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article