Ad imageAd image

ವಿಜಯಪುರ: ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ

Nagesh Talawar
ವಿಜಯಪುರ: ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಸುಮಾರು 1,777 ಎಕರೆ ಭೂಮಿ ಪೂರ್ಣ ಭೂಸ್ವಾಧೀನದಿಂದ ಕೈಬಿಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಗೂ ಸಂಯುಕ್ತ ಹೋರಾಟ ಸಮಿತಿ ಕರ್ನಾಟಕ ಜಂಟಿಯಾಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಮಾತನಾಡಿ, ಸುಮಾರು 1,195 ದಿನಗಳಿಂದ ಬಲವಂತದ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ಅಂತಿಮ ಹಂತ ತಲುಪಿದ್ದು, ರೈತರ ತಿರ್ಪು ಕೈಗೊಳ್ಳಲು ಶೀಘ್ರ ಮಧ್ಯ ಪ್ರವೇಶಿಸುವಂತೆ ದೇಹಲಿಯ ಕಾಂಗ್ರೆಸ್ ವರಿಷ್ಠರಿಗೆ ಆಗ್ರಹಿಸುವೆ. ದೇವನಹಳ್ಳಿಯ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ 13 ಹಳ್ಳಿಯ ರೈತರು ನಾವು ಪ್ರಾಣವನ್ನಾದರೂ ಕೊಟ್ಟೆವು ಭೂಮಿಯನ್ನು ಕೊಡುವುದಿಲ್ಲವೆಂದು 3 ವರ್ಷಗಳಿಂದ ಮೀರಿದ ಹೋರಾಟ ನಡೆಸುತ್ತಿರುವುದು ತಮಗೆ ತಿಳದಿದೆ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ವಚನ ಭ್ರಷ್ಟವಾಗಿದೆ. ಎರಡೂವರೆ ವರ್ಷಗಳ ಅವಧಿ ಮುಗಿದರೂ ಸರ್ಕಾರ ಗಮನ ಹರಿಸದೆ ಕೊಟ್ಟಿರುವ ವಚನ ಪಾಲಿಸುತ್ತಿಲ್ಲ. ಹಾಗಾಗಿ ಅಹಿಂದಪರ ಮುಖ್ಯಮಂತ್ರಿಗಳು ಕೂಲಂಕುಷವಾಗಿ ಪರಿಗಣಿಸಿ ರೈತರ ಭೂಮಿಯನ್ನು ರೈತರಿಗೆ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ರೈತರಪರವಾಗಿ ಭೂಮಿ ಹೋರಾಟವನ್ನು ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಪ್ಪಾಸಾಹೇಬ ಯರನಾಳ, ಭೀ.ಭಗವಾನ ರೆಡ್ಡಿ ಮಾತನಾಡಿದರು. ಬೆಳಗಾವಿ ವಿಭಾಗೀಯ ಸಂಚಾಲಕರಾದ ಸಂಜು ವೈ.ಕಂಬಾಗಿ, ಜಿಲ್ಲಾ ಸಂಚಾಲಕರಾದ ಶಿವು ಮೇಲಿನಮನಿ, ಮಹಿಳಾ ಒಕ್ಕೂಟದ ಸಂಚಾಲಕಿ ಸವಿತಾ ವಗ್ಗರ, ಸುನಂದಾ ದೊಡಮನಿ, ಯಲ್ಲಪ್ಪ ಕಾಂಬಳೆ, ಸಂತೋಷ ಭಾಸ್ಕರ, ನಕುಶಾ ಕಾಂಬಳೆ, ಹುಚ್ಚಪ್ಪ ಲೋಕುರ, ಸಾಯಬಣ್ಣ ದಳಪತಿ, ಗೋವಿಂದ ದೊಡಮನಿ, ವಿಶ್ವಾಸ ಕಾಂಬಳೆ, ವಿಠ್ಠಲ ಕಡೇಮನಿ, ರಾಜು ಮೇತ್ರಿ, ವಿಜಯಕುಮಾರ ಅರಕೇರಿ, ರಾಯಪ್ಪ ಕನ್ನೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article