ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿರುವ ವಾರ್ಡ್ ಗಳು ಮೂಲಭೂತ ಸೌಕರ್ಯಗಳು ಇಲ್ಲದೆ ಸ್ಥಳೀಯ ನಿವಾಸಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಚರಂಡಿ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದರಿಂದ ಸ್ವಚ್ಛತೆ ಮರಿಚಿಕೆಯಾಗಿದೆ. ಹೀಗಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿ ಡೆಂಗ್ಯೂಗೆ ಕಾರಣವಾಗುತ್ತಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಿ ಎಂದು ಆಗ್ರಹಿಸಿ, ಜಯ ಕರ್ನಾಟಕ(Jaya Karnataka) ಸಂಘಟನೆ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರಿಗೆ ಮನವಿ ಸಲ್ಲಿಸಲಾಯಿತು.
ವಾರ್ಡ್ ನಂಬರ್ 18, 19, 20, 21ರಲ್ಲಿ ಮೂಲಭೂತ ಸೌಕರ್ಯಗಳಿಲ್ಲ, 18 ಹಾಗೂ 19ನೇ ವಾರ್ಡ್ ನಲ್ಲಿ ಬೋರ್ ವೆಲ್ ಇದ್ದು ಸರಿಯಾಗಿ ನಿರ್ವಹಣೆಯಿಲ್ಲದೆ ಕುಡಿಯುವ ನೀರಿನ ಸಮಸ್ಯೆಯಿದೆ. ಕೂಡಲೇ ಈ ಸಮಸ್ಯೆಗಳಿಗೆ ಸ್ಪಂದಿಸಿ ಸರಿಪಡಿಸಬೇಕು. ಇಲ್ಲದೆ ಹೋದರೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಲಾಯಿತು. ಈ ವೇಳೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಹಾಗೂ ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕಾ ಉಸ್ತುವಾರಿಗಳಾದ ಚನ್ನಪ್ಪಗೌಡ ಎಸ್.ಬಿರಾದಾರ, ಸಂತೋಷ ಎಸ್.ಮನಗೂಳಿ, ಸಿದ್ರಾಮಪ್ಪ ಎಸ್.ಅವಟಿ, ಸೋಮಲಿಂಗ ಎಸ್.ನಾಯ್ಕೋಡಿ, ನಾಗಣ್ಣ ಪಡೆಕನೂರ, ರಮೇಶ ರಾಠೋಡ, ಶರಣು ಮನಗೂಳಿ, ಮುನ್ನಾ ಮುಜಾವರ, ಅಶೋಕ ಪಾಟೀಲ, ಸಿದ್ದು ತಮದೊಡ್ಡಿ, ಸದ್ದಾಂ ಮುಲ್ಲಾ, ಕಿರಣಕುಮಾರ ತಳವಾರ, ದಾದಾಗೌಡ ಮೋರಟಗಿ, ಮನೋಜ್ ಪಾಟೀಲ, ಶ್ರೀಶೈಲ ಮೋರಟಗಿ ಸೇರಿ ಇತರರು ಉಪಸ್ಥಿತರಿದ್ದರು.