ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ ವಿರೋಧಿಸಿ ವಿಜಯಪುರ ಜಿಲ್ಲೆಯಲ್ಲಿ ಕಳೆದ ನೂರಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಜನವರಿ 1 ರಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಬಿ ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕುವ ಯತ್ನ ನಡೆದಿದ್ದು, ಈ ವೇಳೆ ಕೆಲವು ಹೋರಾಟಗಾರರನ್ನು ಬಂಧಿಸಲಾಗಿದೆ. ಇದನ್ನು ಖಂಡಿಸಿ ಮೈಸೂರಿನಲ್ಲಿ ಪ್ರತಭಟನೆ ನಡೆಸಲಾಗಿದೆ.
ಕೊಲೆ ಯತ್ನ, ಕೊಲೆ ಬೆದರಿಕೆ ಯಂತಹ ಮೊಕದ್ದಮೆಗಳನ್ನು ಹೋರಾಟಗಾರರ ವಿರುದ್ಧ ಪೋಲಿಸಿನವರು ಹಾಕಿದ್ದಾರೆ. ನ್ಯಾಯಯುತ ಹೋರಾಟವನ್ನು ಹತ್ತಿಕ್ಕುವ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂಧರ್ಭದಲ್ಲಿ ಎಐಕೆಕೆಎಂಎಸ್‌ನ ರಾಜ್ಯ ಅಧ್ಯಕ್ಷರಾದ ಎಂ.ಶಶಿಧರ್, ಜನಾಂದೋಲನಗಳ ಮಹಾ ಮೈತ್ರಿಯ ರಾಜ್ಯ ನಾಯಕರಾದ ಉಗ್ರನರಸಿಂಹೇಗೌಡರು, ಎಸ್ ಯುಸಿಐ-ಸಿ ಜಿಲ್ಲಾ ಕಾರ್ಯದರ್ಶಿ ರವಿ.ಬಿ, ಎಐಕೆಕೆಎಂಎಸ್‌ನ ರಾಜ್ಯ ಕಚೇರಿ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಎಐಕೆಕೆಎಂಎಸ್‌ನ ಜಿಲ್ಲಾಧ್ಯಕ್ಷ ಬಸವರಾಜು.ಹೆಚ್.ಎಂ, ಎಐಕೆಕೆಎಂಎಸ್‌ನ ಜಿಲ್ಲಾ ಉಪಾಧ್ಯಕ್ಷ ಕೆಲ್ಲಹಳ್ಳಿ ರಾಮಣ್ಣ.ಬಿ, ಎಐಯುಟಿಯುಸಿ ನಾಯಕರು, ಎಐಂಎಸ್ಎಸ್ ನಾಯಕರು, ಎಐಡಿವೈಒ ನಾಯಕರು ಹಾಗೂ ನಂಜುಡ, ಉಮೇಶ್, ಶಿವಣ್ಣ ನಾಯಕ, ಮಹೇಶ್, ರೈತ ಮಹಿಳೆಯರಾದ ಜಯಲಕ್ಷ್ಮೀ, ನಾಗಮ್ಮ, ಹೂವಮ್ಮ ಮುಂತಾದವರು ಉಪಸ್ಥಿತರಿದ್ದರು.




