ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಇದನ್ನು ಖಂಡಿಸಿ ತಾಲೂಕಿನ ಗೋಲಗೇರಿಯಲ್ಲಿ ಬುಧವಾರ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಹೆದ್ದಾರಿ ಬಂದ್ ಮಾಡಿ, ಟಯರ್ ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ವೇಳೆ ಸಂತೋಷ ಪಾಟೀಲ ಮಾತನಾಡಿ, ಬಡ ಪಂಚಮಸಾಲಿ ಮಕ್ಕಳಿಗೆ ಮೀಸಲಾತಿ ಕೊಡುವ ಸಲುವಾಗಿ ಸುಮಾರು ಐದು ವರ್ಷದಿಂದ ಹೋರಾಟ ಮಾಡ್ತಿದ್ದೇವೆ. ನಿನ್ನೆ ರಾಜ್ಯ ಸರ್ಕಾರ ಲಾಠಿ ಚಾರ್ಜ್ ಮಾಡಿಸಿ ಅನ್ಯಾಯ ಮಾಡಿದೆ. ಮುಂದೆ ದೊಡ್ಡ ಹೋರಾಟ ಮಾಡುತ್ತೇವೆ. ಎಷ್ಟು ಜನರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರೆ ನೋಡೋಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ದನಗೌಡ ಪಾಟೀಲ, ಗೌಡಣ್ಣ ಆಲಮೇಲ, ಪ್ರಭುಗೌಡ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಶೈಲ ಚಳ್ಳಗಿ, ಸುನೀಲಗೌಡ ಪಾಟೀಲ, ಕುಮಾರಗೌಡ ಪಾಟೀಲ, ಪ್ರಕಾಶ ಹೊಸಮನಿ, ಗೋಲ್ಲಾಳಗೌಡ ಬಿರಾದಾರ, ಮುದಕನಗೌಡ ಬಿರಾದಾರ, ಮಲಕನಗೌಡ ಪಾಟೀಲ, ಸಂತೋಷ ರದ್ದೇವಾಡಗಿ, ಸುಭಾಸಗೌಡ ಬಿರಾದರ, ಓಂಪ್ರಕಾಶ ಬಿರಾದಾರ, ಮಾಂತಗೌಡ ಬಿರಾದಾರ, ಬಸನಗೌಡ ಮೇಲಿನಮನಿ, ಗೋಲ್ಲಾಳ ಮೇಲಿನಮನಿ ಹಾಜರಿದ್ದರು.