ಪ್ರಜಾಸ್ತ್ರ ಸುದ್ದಿ
ಕೋಯಿಕ್ಕೋಡ್(Kozhikode): ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ ಉಷಾ ಅವರ ಪತಿ ಶ್ರೀನಿವಾಸನ್(67) ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಕೇರಳದ ಕೋಯಿಕ್ಕೋಡ್ ದಲ್ಲಿರುವ ನಿವಾಸದಲ್ಲಿ ಬೆಳಗಿನಜಾವ ಕುಸಿದು ಬಿದ್ದಿದ್ದಾರೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೂ ಬದುಕುಳಿಯಲಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರದ ನಿವೃತ್ತ ನೌಕರರಾಗಿದ್ದಾರೆ. ಪತ್ನಿ ಪಿ.ಟಿ ಉಷಾ ಅವರ ಕ್ರೀಡಾ ಪಯಣದಲ್ಲಿ ಸದಾ ಜೊತೆಗಿದ್ದರು. ಪ್ರಧಾನಿ ಮೋದಿ ಅವರು ಪಿ.ಟಿ ಉಷಾಗೆ ಫೋನ್ ಮಾಡಿ ಮಾತನಾಡಿದ್ದು, ಸಂತಾಪ ಸೂಚಿಸಿದ್ದಾರೆ.




