Ad imageAd image

ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ

Nagesh Talawar
ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಮಹಿಳಾ ಏಕದಿನ ವಿಶ್ವಕಪ್-2025 ಟೂರ್ನಿಯ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಸೆಪ್ಟೆಂಬರ್ 30ರಿಂದ ನವೆಂಬರ್ 2ರ ತನಕ ಟೂರ್ನಿ ನಡೆಯಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷ ಭಾರತ ಆತಿಥ್ಯವಹಿಸಿಕೊಂಡಿದೆ. 8 ದೇಶಗಳ ತಂಡಗಳು ಪ್ರಶಸ್ತಿಗೆ ಪೈಪೋಟಿ ನಡೆಸಲಿವೆ.

ಸೆಪ್ಟೆಂಬರ್ 30ರಂದು ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಹಾಗೂ ಶ್ರೀಲಂಕಾ ನಡುವೆ ಕದನ ನಡೆಯಲಿದೆ. ಭಾರತ 7 ಪಂದ್ಯಗಳನ್ನು ಆಡಲಿದೆ. ಬೆಂಗಳೂರು, ವಿಶಾಖಪಟ್ಟಣ, ಇಂದೋರ್, ಗುವಾಹಟಿಯಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಭಾರತ ಹಾಗೂ ಪಾಕ್ ನಡುವೆ ಸಂಘರ್ಷದ ಕಾರ್ಮೋಡ ಇರುವುದರಿಂದ ಶ್ರೀಲಂಕಾದ ಕೊಲಂಬೊದ ಆರ್.ಪ್ರೇಮದಾಸ ಮೈದಾನದಲ್ಲಿ ಪಾಕ್ ನ ಎಲ್ಲ ಪಂದ್ಯಗಳು ನಡೆಯಲಿವೆ.

WhatsApp Group Join Now
Telegram Group Join Now
Share This Article