ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಐಸಿಸಿ ಮಹಿಳಾ ಟಿ-20 ವಿಶ್ವಕಪ್ ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಲಾಗಿದೆ. ಇಂಗ್ಲೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ಈ ಟೂರ್ನಿ ನಡೆಯಲಿದೆ. ಜೂನ್ 12ರಂದು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ. ಇನ್ನು ಜೂನ್ 14ರಂದು ಎಜ್ ಬಾಸ್ಟ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದೆ.
24 ದಿನಗಳ ಕಾಲ ಟೂರ್ನಿ ನಡೆಯಲಿದ್ದು 33 ಪಂದ್ಯಗಳು ನಡೆಯಲಿವೆ. 12 ತಂಡಗಳು ಸೆಣಸಾಟ ನಡೆಸಲಿವೆ. 6 ತಂಡಗಳಂತೆ 2 ಗುಂಪು ಮಾಡಲಾಗಿದೆ. ಮೊದಲ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಎರಡು ಕ್ವಾಲಿಫೈಯರ್ ತಂಡಗಳು ಮೊದಲ ಗುಂಪಿನಲ್ಲಿವೆ.
ನ್ಯೂಜಿಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ಎರಡು ಕ್ವಾಲಿಫೈಯರ್ ತಂಡಗಳು 2ನೇ ತಂಡದಲ್ಲಿವೆ. ಪ್ರತಿ ತಂಡಗಳು ತಲಾ 5 ಪಂದ್ಯಗಳನ್ನು ಆಡಲಿವೆ. ಎರಡು ಗುಂಪಿನ ಟಾಪ್ 1 ತಂಡ ಸೆಮಿಫೈನಲ್ ತಲುಪಲಿವೆ. ಭಾರತ ಇದುವರೆಗೂ ಟಿ-20 ವರ್ಲ್ಡ್ ಕಪ್ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆದ್ದು ಬೀಗುವ ನಿರೀಕ್ಷೆಯಲ್ಲಿದೆ.