ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಇಂದು ಶ್ರಾವಣ ಕೊನೆ ಸೋಮವಾರ ಹಾಗೂ ಬೆನಕನ ಅಮವಾಸ್ಯ ನಿಮಿತ್ತ ತಾಲೂಕಿನಾದ್ಯಂತ ಧಾರ್ಮಿಕ ಆಚರಣೆಗಳು ನಡೆಯುತ್ತಿವೆ. ಒಂದು ತಿಂಗಳ ಕಾಲ ವಿವಿಧ ಪೂಜೆ, ಪುನಸ್ಕಾರಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಇದೆ ರೀತಿ ಶ್ರಾವಣ ಕೊನೆಯ ಸೋಮವಾರ ಪಟ್ಟಣದಲ್ಲಿರುವ ಪುರಾತನ ದೇವಸ್ಥಾನಗಳಾದ ಮಲ್ಲಯ್ಯನ ಗುಡಿ, ಸಂಗಮೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಭಕ್ತಾದಿಗಳು ತಮ್ಮ ಹರಕೆಯನ್ನು ತೀರಿಸುತ್ತಿದ್ದಾರೆ. ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಕೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಎಲ್ಲೆಡೆ ಇರುವ ದೇವಸ್ಥಾನಗಳಲ್ಲಿ ಭಕ್ತಿಯ ಸಂಭ್ರಮ ಜೋರಾಗಿದೆ. ಶ್ರಾವಣದೊಂದಿಗೆ ಸಾಲು ಸಾಲು ಹಬ್ಬಗಳು ಶುರುವಾಗಲಿವೆ. ಗಣೇಶ ಚತುರ್ಥಿ, ಈದ್ ಮಿಲಾದ್, ವಿಜಯ ದಶಮಿ ಹೀಗೆ ಎಲ್ಲ ಧಾರ್ಮಿಕ ಹಬ್ಬಗಳ ಸರದಿ ಶುರುವಾಗುತ್ತೆ.