Ad imageAd image

ಸಿಂದಗಿ: ಡಿ.21ರಿಂದ ಪಲ್ಸ್ ಪೋಲಿಯೊ ಲಿಸಿಕಾ ಅಭಿಯಾನ

Nagesh Talawar
ಸಿಂದಗಿ: ಡಿ.21ರಿಂದ ಪಲ್ಸ್ ಪೋಲಿಯೊ ಲಿಸಿಕಾ ಅಭಿಯಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಡಿಸೆಂಬರ್ 21ರಿಂದ 24ರ ತನಕ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ನಡೆಯಲಿದೆ. 5 ವರ್ಷದೊಳಗಿನ ಎಲ್ಲ ಮಕ್ಕಳು ತಪ್ಪದೆ ಹಾಕಿಸುವಂತೆ ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು. ತಾಲೂಕು ಆಡಳಿತ ಕಚೇರಿಯಲ್ಲಿ ನಡೆದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಸೆಂಬರ್ 21ರಂದು ಬೂತ್ ಮಟ್ಟದಲ್ಲಿ ಪೋಲಿಯೊ ಹಾಕಲಾಗುತ್ತೆ. ಉಳಿದ ಮೂರು ದಿನ ಮನೆ ಮನೆಗೆ ಹೋಗಿ ಪೋಲಿಯೊ ಹಾಕಲಾಗುವುದು ಎಂದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ಶಶಿಕಾಂತ ಬಾಗೇವಾಡಿ ಮಾತನಾಡಿ, ತಾಲೂಕಾನಾದ್ಯಾಂತ 5 ವರ್ಷದೊಳಗಿನ ಒಟ್ಟು 54,055 ಮಕ್ಕಳು ಲಸಿಕೆ ಪಡೆಯಲಿದ್ದು, ಒಟ್ಟು 233 ಬೂತಗಳನ್ನು ಸ್ಥಾಪಿಸಿದ್ದು, 243 ತಂಡಗಳು ಕಾರ್ಯನಿರ್ವಹಿಸುತ್ತಿದ್ದು 484 ಲಸಿಕೆ ನಿಡುವವರು, 48 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆಂದು ತಿಳಿಸಿದರು. ಆಲಮೇಲ ತಹಶೀಲದಾರ್ ಮಲ್ಲಿಕಾರ್ಜುನ ಅರಕೇರಿ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಇರುವ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು ಶಾಲೆಯ ಮುಖ್ಯೋಪಾದ್ಯಾಯರು ಸಹಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನಿಡಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕೈಜೊಡಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಆರ್.ಬಿ.ಎಸ್.ಕೆ, ವೈದ್ಯಾಧಿಕಾರಿ ಆರ್.ಕೆ.ಎಸ್.ಕೆ, ಸಿಬ್ಬಂದಿ ಹಾಗೂ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ತಾಲೂಕಾ ಆರೋಗ್ಯಾಧಿಕಾರಿ ಕಾರ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. ತಾಲೂಕಾ ಹಿರಿಯ ಆರೋಗ್ಯಾ ನಿರಿಕ್ಷಣಾಧಿಕಾರಿ ಪಿ.ವಾಯ್.ಚೌಡಕಿ ಸ್ವಾಗತಿಸದರು, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಪ್ರಾಸ್ಥಾವಿಕ ಮಾತನಾಡಿದರು.

WhatsApp Group Join Now
Telegram Group Join Now
Share This Article