ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಕಾರಿನಲ್ಲಿರುವ ದಂಪತಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಬುಧವಾರ ರಾತ್ರಿ ಇಂತಹ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ದೀಪಾವಳಿ ಖರೀದಿ ಮುಗಿಸಿಕೊಂಡು ಅನೂಪ್ ಜಾರ್ಜ್ ಹಾಗೂ ಜೀಸ್ ದಂಪತಿ ಇಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ರೋಡ್ ರೇಜ್(Road Rage) ಘಟನೆ ನಡೆದಿದೆ.
ಕಾರಿನ ಗ್ಲಾಸ್ ಇಳಿಸುವಂತೆ ಆವಾಜ್ ಹಾಕಿದ್ದಾರೆ. ಅನೂಪ್ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಕಾರು ಫಾಲೋ ಮಾಡಿದ ಪುಂಡರು ಕಲ್ಲು ಎಸೆದಿದ್ದಾರೆ. ಇದರಿಂದಾಗಿ 5 ವರ್ಷದ ಮಗುವಿನ ತಲೆಗೆ ಗಾಯವಾಗಿದೆ. 11 ವರ್ಷದ ಮಗು ಬಚಾವ್ ಆಗಿದೆ. ಬೈಕ್ ನಲ್ಲಿ ಚೇಸ್ ಮಾಡಿದ್ದ ಇಬ್ಬರು ಪುಂಡರ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ಇಂತವರ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ.