Ad imageAd image

ಪುನೀತ್ ಇದ್ದಿದ್ದರೆ 50 ವರ್ಷದ ಸಂಭ್ರಮ

Nagesh Talawar
ಪುನೀತ್ ಇದ್ದಿದ್ದರೆ 50 ವರ್ಷದ ಸಂಭ್ರಮ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಸ್ಯಾಂಡಲ್ ವುಡ್ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ಇಂದು ಬದುಕಿದ್ದರೆ 50 ವರ್ಷದ ಹುಟ್ಟು ಹಬ್ಬವನ್ನು ಎಲ್ಲರೊಂದಿಗೆ ಸಂಭ್ರಮದಿಂದ ಆಚರಿಸಬಹುದಿತ್ತು. ದುರಾದೃಷ್ಟವಶಾತ್ 46ನೇ ವರ್ಷಕ್ಕೆ ಹೃದಯಾಘಾತದಿಂದ ನಿಧನರಾದರು. ಆದರೂ ಅವರ ಮೇಲಿನ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರು ಅಪ್ಪು ಇಷ್ಟಪಡುತ್ತಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಜನರು ಮುಂಜಾನೆಯಿಂದಲೇ ಭೇಟಿ ನೀಡುತ್ತಿದ್ದಾರೆ.

ಅಭಿಮಾನಿಗಳು ಸೇರಿದಂತೆ ನಾಡಿನಾದ್ಯಂತ ವಿವಿಧ ಸಂಘ, ಸಂಸ್ಥೆಗಳು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಸರ್ಕಾರದಿಂದ ಸ್ಪೂರ್ತಿ ದಿನ ಎಂದು ಆಚರಿಸಲಾಗುತ್ತಿದೆ. ಈ ಮೂಲಕ ಅಸಂಖ್ಯಾತ ಜನರಿಗೆ ಬದುಕಿನಲ್ಲಿ ಸ್ಪೂರ್ತಿಯಾಗಿದ್ದಾರೆ. ಪುನೀತ್ ರಾಜಕುಮಾರ್ ನಿಧನರಾಗಿ ನಾಲ್ಕು ವರ್ಷವಾಗಿದೆ. ಸದಾ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ.

WhatsApp Group Join Now
Telegram Group Join Now
Share This Article