Ad imageAd image

ಪುಷ್ಪ-2 ಪ್ರಕರಣ, ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ

Nagesh Talawar
ಪುಷ್ಪ-2 ಪ್ರಕರಣ, ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹೈದರಾಬಾದ್(Hyderabad): ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಮಗು ಗಾಯಗೊಂಡಿದೆ. ಇದು ಪೊಲೀಸ್ ಠಾಣೆ ಮೆಟ್ಟಿಲು ಏರಿ ನಟನ ಬಂಧನವಾಗಿ, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್, ವೈದ್ಯರೊಂದಿಗೆ ಮಾತನಾಡಿದ್ದೇನೆ. ಮಗು ಚೇತರಿಸಿಕೊಳ್ಳುತ್ತಿರುವ ವಿಚಾರ ಕೇಳಿ ಖುಷಿಯಾಗಿದೆ ಎಂದರು.

ಈ ಘಟನೆ ಹಿನ್ನಲೆಯಲ್ಲಿ ಮಗು ಹಾಗೂ ಅವರ ಕುಟುಂಬ ನೆರವಣಿಗೆ ನಟನ ಕಡೆಯಿಂದ 1 ಕೋಟಿ, ನಿರ್ದೇಶಕ ಹಾಗೂ ನಿರ್ಪಾಪಕರು ತಲಾ 50 ಲಕ್ಷ ರೂಪಾಯಿ ಸೇರಿ 2 ಕೋಟಿ ರೂಪಾಯಿಯನ್ನು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದ ಬಳಿಕ ಈ ವಿಷಯವನ್ನು ಮಾಧ್ಯಮದವರ ಮೂಲಕ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article