ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಅಮೆರಿಕ ಬೆದರಿಕೆ ನಡುವೆಯೂ ಭಾರತಕ್ಕೆ ತೈಲ ಪೂರೈಕೆ ನಿರಂತರವಾಗಿ ಮುಂದುವರೆಯುತ್ತೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ. ಭಾರತ ಪ್ರವಾಸದಲ್ಲಿರುವ ಅವರು, ಪ್ರಧಾನಿ ಮೋದಿಯೊಂದಿಗಿನ ಮಾತುಕತೆ ವೇಳೆ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದಿದ್ದಾರೆ.
ಮಾಸ್ಕೋದಿಂದ ತೈಲ ಖರೀದಿಸುವಂತೆ ಅಮೆರಿಕ ಭಾರತದ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ಇದಕ್ಕೆ ಭಾರತ ಸೊಪ್ಪು ಹಾಕಿಲ್ಲ. ಅದಕ್ಕೆ ಬೆಂಬಲ ನೀಡುವಂತೆ ಭಾರತಕ್ಕೆ ನಿರಂತರವಾಗಿ ತೈಲ ಪೂರೈಕೆ ಮಾಡಲಾಗುವುದು. ಇದರ ಜೊತೆಗೆ ಅನಿಲ್, ಕಲ್ಲಿದ್ದಲು ಸೇರಿದಂತೆ ಅಗತ್ಯ ವಸ್ತುಗಳನ್ನು ಸಾಗಾಟ ಮಾಡಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ.




