ಪ್ರಜಾಸ್ತ್ರ ಸುದ್ದಿ
ಪುತ್ತೂರು(Puttoru): ಏಳು ತಿಂಗಳ ಗರ್ಭಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ದಾರುಣ ಘಟನೆ ಚಿಕ್ಕಪುತ್ತೂರಿನಲ್ಲಿ ಭಾನುವಾರ ತಡರಾತ್ರಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೇಷ್ಮಾ(28) ಮೃತ ದುರ್ದೈವಿ. ಸುರತ್ಕಲ್ ಮೂಲದ ರೇಷ್ಮಾಳನ್ನು ಚಿಕ್ಕಪುತ್ತೂರಿನ ಚಿಂತನ್ ಜೊತೆಗೆ ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿದೆ. ಇವರಿಗೆ ಒಬ್ಬಳು ಮಗಳಿದ್ದಾಳೆ.
ಗರ್ಭಿಣಿ ರೇಷ್ಮಾ ಯಾವ ಕಾರಣಕ್ಕೆ ಇಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾಳೆ ಅನ್ನೋದು ಗೊತ್ತಾಗಿಲ್ಲ. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯಿಂದ ಸತ್ಯಾಂಶ ತಿಳಿದು ಬರಬೇಕಿದೆ.