ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಒಳಮೀಸಲಾತಿ ತರಲು ಬಿಜೆಪಿ ಈ ಹಿಂದೆ ಪ್ರಯತ್ನಿಸುತ್ತು. ಆದರೆ, ಕಾಂಗ್ರೆಸ್ ಇದನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ. ಒಳಮೀಸಲಾತಿ ವಿಚಾರದಲ್ಲಿ ಪ್ರಧಾನಿ ಮೋದಿಯವರ ಬೆಂಬಲವದೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಹಿಂದಿನ ನಮ್ಮ ಸರ್ಕಾರ ಒಳಮೀಸಲಾತಿ ಜಾರಿಗೆ ತಂದಿತ್ತು. ಒಳಮೀಸಲಾತಿ ಅಧಿಕಾರ ರಾಜ್ಯಕ್ಕೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದೆ. ಹೀಗಾಗಿ ತೆಲಂಗಾಣಕ್ಕೆ ಈ ಹಿಂದೆ ಪ್ರಧಾನಿ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಒಳಮೀಸಲಾತಿಗೆ ಅನುಮೋದನೆ ನೀಡಿದ್ದಾರೆ. ಈ ವಿಚಾರದಲ್ಲಿ ಹಾಗೂ ಜಾತಿ ಗಣತಿ ವಿಚಾರದಲ್ಲಿ ಸರ್ಕಾರ ಎಸ್ಐಟಿ ರಚಿಸಿದರೂ ಅಚ್ಚರಿಯಿಲ್ಲವೆಂದು ಕಿಡಿ ಕಾರಿದರು.
ಇನ್ನು ಎಸ್ಐಟಿ ನಿಜಬಣ್ಣ ಈಗ ಬದಲಾಗಿದೆ. ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು. ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು ಆಗಿದೆ. ಹೀಗಾಗಿ ಡಬಲ್ ಎಸ್ಐಟಿ ಸ್ಥಾಪಿಸಬೇಕಿದೆ. ಯಡಿಯೂರಪ್ಪ ಪ್ರಕರಣಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಮುಡಾ, ವಾಲ್ಮೀಕಿ ಹಗರಣದ ತನಿಖೆಗೆ ಕೋರ್ಟ್ ಯಾವುದೇ ತಡೆ ನೀಡಿಲ್ಲ. ನಮಗೆ ಕಾಂಗ್ರೆಸ್ ನ್ಯಾಯಾಲಯದ ಸರ್ಟಿಫಿಕೇಟ್ ಬೇಡ ಅಂತಾ ಹೇಳಿದರು.