ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಕ್ಷ ಬಿಡುವ ಮೂಲಕ ಸಿ.ಪಿ ಯೋಗೇಶ್ವರ್ ಪಕ್ಷ ದ್ರೋಹ ಮಾಡಿದ್ದಾರೆ. ಜೆಡಿಎಸ್ ನಾಯಕರನ್ನು ಒಪ್ಪಿಸಿ ಅವರಿಗೆ ಟಿಕೆಟ್ ಕೊಡಲು ನಾನು ಸೇರಿದಂತೆ ಬಿಜೆಪಿ ನಾಯಕರು ತಯಾರಾಗಿದ್ದರು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಕಾಂಗ್ರೆಸ್ ಗೆ ಹೋಗಿರುವ ಯೋಗೇಶ್ವರಗೆ ರಾಜಕೀಯ ಭವಿಷ್ಯ ಇಲ್ಲ. ಚನ್ನಪಟ್ಟಣದಲ್ಲಿ ಸ್ಪರ್ಧಿಸಿದರೆ ಲೀಡ್ ಸಿಗಲ್ಲ. ಡಿ.ಕೆ ಶಿವಕುಮಾರ್ ಕರೆಸಿಕೊಂಡು ಕೆಡಿಸಿದ್ದಾರೆ ಎಂದರು.
ಇಲ್ಲಿ ಯಾವ ತಂತ್ರಗಾರಿಕೆ ಇಲ್ಲ. ಅಲ್ಲಿ ಜೆಡಿಎಸ್ ಸೀಟು. ಅಂತಿಮವಾಗಿ ಅವರು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಬಿಜೆಪಿಯಲ್ಲಿ ಯೋಗೇಶ್ವರಗೆ ಹಿರಿತನವಿತ್ತು. ಕಾಂಗ್ರೆಸ್ಸಿಗೆ ಹೋಗಿ ಕೊನೆಯ ಸಾಲಿನಲ್ಲಿ ನಿಂತಿದ್ದಾರೆ. ನಮಗೆ ಇಲ್ಲಿ ಬಿಜೆಪಿ, ಜೆಡಿಎಸ್ ಅನ್ನೋದು ಮುಖ್ಯವಲ್ಲ. ಎನ್ ಡಿಎ ಗೆಲ್ಲಬೇಕು ಅಂತಾ ಹೇಳಿದರು.