ಪ್ರಜಾಸ್ತ್ರ ಸುದ್ದಿ
ಇಂಡಿಯನ್ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಆರ್.ಅಶ್ವಿನ್ ಐಪಿಎಲ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಬೌಲರ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿಕೊಂಡು ಬರುತ್ತಿದ್ದರು. ಇದೀಗ ನಿವೃತ್ತಿ ಘೋಷಿಸಿದ್ದಾರೆ. ತಮಗೆ ಸಹಕಾರ ನೀಡಿದ ಐಪಿಎಲ್, ಬಿಸಿಸಿಐ ಹಾಗೂ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.
2008-2015 ಚೆನ್ನೈ ಸೂಪರ್ ಕಿಂಗ್ಸ್, 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್, 2018-19 ಕಿಂಗ್ಸ್ ಎಲೆವನ್ ಪಂಜಾಬ್, 2020-21ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2022-24ರಲ್ಲಿ ರಾಜಸ್ಥಾನ್ ರಾಐಲ್ಸ್ ಪರ ಆಡಿದ್ದಾರೆ. 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದರು. 2023ರಲ್ಲಿ ಕೊನೆಯ ಏಕದಿನ ಪಂದ್ಯ, 2024 ಕೊನೆಯ ಟೆಸ್ಟ್ ಪಂದ್ಯ, 2022ರಲ್ಲಿ ಕೊನೆಯ ಟಿ-20 ಪಂದ್ಯ ಆಡಿದ್ದಾರೆ.