ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಭೈರಾದೇವಿ ಸಿನಿಮಾ ಮೂಲಕ ಕಂಬ್ಯಾಕ್ ಮಾಡಿರುವ ನಟಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ವಹಿಸಿಕೊಂಡಿದ್ದಾರೆ. ನಗರದ ಮಂತ್ರಿ ಮಾಲ್ ನಲ್ಲಿ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ, ಒಂದು ವೇಳೆ ಈ ಸಿನಿಮಾ ಯಶಸ್ವಿಯಾಗದಿದ್ದರೆ ನಾನು ಮತ್ತೆ ನಟಿಸುವುದಿಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ನಿರ್ದೇಶ ಶ್ರೀಜೆ ಭೈರಾದೇವಿ(Bhairadevi Kannada Movie) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಕಥೆಯನ್ನು ನನ್ನ ಮುಂದೆ ಹೇಳಿದಾಗಲೇ ನಿರ್ದೇಶಕರಿಗೆ ಹೇಳಿದ್ದೇನೆ. ಒಂದು ವೇಳೆ ಈ ಸಿನಿಮಾ ಸಕ್ಸಸ್ ಆಗದಿದ್ದರೆ ನಾನು ಮತ್ತೆ ನಟಿಸುವುದಿಲ್ಲವೆಂದು. ಒಂದೊಳ್ಳೆ ಕಥೆಯಿರುವ ಚಿತ್ರ ಮಾಡಿದ್ದೇವೆ. ಕುಟುಂಬ ಸಮೇತ ಬಂದು ನೀವೆಲ್ಲ ಸಿನಿಮಾ ನೋಡಿ. ಇದಕ್ಕಾಗಿ ಸಾಕಷ್ಟು ಕಷ್ಟಪಟ್ಟಿದ್ದೇವೆ. ನಿಮ್ಮೆಲ್ಲರಿಗೂ ಸಿನಿಮಾ ಇಷ್ಟವಾಗುತ್ತೆ. ಎಲ್ಲರೂ ಬಂದು ನೋಡಿ ಎಂದಿದ್ದಾರೆ. ನಟ ರಮೇಶ್( Ramesh Arvind) ಅರವಿಂದ್, ರವಿ ಶಂಕರ್(Ravi Shankar) ಸಹ ಇದರಲ್ಲಿ ಕಾಣಿಸಿಕೊಂಡಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಟ್ರೇಲರ್ ನೋಡಿದವರಿಗೆ ಕುತೂಹಲ ಮೂಡಿಸಿದ್ದು ಮಾತ್ರ ಸತ್ಯ. ಅಕ್ಟೋಬರ್ 3ಕ್ಕೆ ಭೈರಾದೇವಿ ರಿಲೀಸ್ ಆಗುತ್ತಿದೆ.