ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಇಂಡಿಯನ್ ಕ್ರಿಕೆಟ್ ಟೀಂ ಖ್ಯಾತ ಮಾಜಿ ಹಿರಿಯ ಆಟಗಾರ, ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಕಾರಿಗೆ ಹಿಂದಿನಿಂದ ಬಂದು ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿದೆ. ರಾಜಧಾನಿಯ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸಣ್ಣದೊಂದು ಅಪಘಾತ ನಡೆದಿದೆ. ಆಗ ರಾಹುಲ್ ದ್ರಾವಿಡ್ ಕಳಗೆ ಇಳಿದು ಸಿಟ್ಟಿನಿಂದ ಗೂಡ್ಸ್ ಚಾಲಕನನ್ನು ಪ್ರಶ್ನಿಸಿದರೆ ಆತ ವಾಪಸ್ ಅವರೊಂದಿಗೆ ಜಗಳ ಮಾಡಿಕೊಂಡಿದ್ದಾನೆ. ಹಿಂದಿನಿಂದ ಬಂದು ಕಾರಿಗೆ ತಾನು ಡಿಕ್ಕಿ ಹೊಡೆದಿದ್ದು ಅಲ್ಲದೇ ಖ್ಯಾತ ಆಟಗಾರನ ವಿರುದ್ಧ ಮಾತನಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಅವರು ಯಾರೆಂದು ತಿಳಿದು ಮೇಲೂ ಅವರೊಂದಿಗೆ ಜಗಳ ಮಾಡಿದ್ದಾನೆ. ಎಲ್ಲರಿಗೂ ಒಂದು ರೂಲ್ಸ್ ಆದರೆ, ಗೂಡ್ಸ್ ಆಟೋ ಚಾಲಕರಿಗೆ ಒಂದು ರೂಲ್ಸ್ ಆಗಿದೆ. ಎಲ್ಲೆಂದರಲ್ಲಿ ಗಾಡಿ ನುಗ್ಗಿಸಿ ಅಪಘಾತ ಮಾಡುವುದು, ಗಲಾಟೆ ಮಾಡುವುದು. ನಂತರ ಸಿಂಪತಿ ಗಿಟ್ಟಿಸಿಕೊಳ್ಳುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆಯಲಾಗಿದೆ. ಕ್ರಿಕೆಟ್ ಆಟದ ಮೂಲಕ ದೇಶಕ್ಕೆ ಇವರು ಕೊಡುಗೆ ಏನೆಂದು ಎಲ್ಲರಿಗೂ ಗೊತ್ತು. ತಪ್ಪು ತನ್ನದಿದ್ದರೂ ಅವರೊಂದಿಗೆ ವಾಗ್ವಾದ ಮಾಡಿರುವ ಗೂಡ್ಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೇಳಲಾಗುತ್ತಿದೆ.