ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಂವಿಧಾನ ಭಾರತದ ಅಡಿಪಾಯ. ಸಂವಿಧಾನ ಇಲ್ಲದಿದ್ದರೆ ಇಂದು ನಾವು ಭಾರತ ಎಂದು ಕರೆಯಲು ಆಗುತ್ತಿರಲಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆ ಸಮನಾಗಿರುವುದು ಬಿಜೆಪಿಗೆ ಇಷ್ಟವಿಲ್ಲ. ಹೀಗಾಗಿ ಸಂವಿಧಾನ ಶಾನಪಡಿಸಲು ಬಿಜೆಪಿ ಹಾಗೂ ಆರ್ ಎಸ್ಎಸ್ ಬಯಸುತ್ತಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಜಯಂತಿ ಹಿನ್ನಲೆಯಲ್ಲಿ ಕಾಂಗ್ರೆಸ್ ನ ಪರಿಶಿಷ್ಟ ಜಾತಿ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ‘ಅಂಬೇಡ್ಕರ್ ಹಾದಿಯಲ್ಲಿ ಹೆಜ್ಜೆ ಸಂವಿಧಾನಕ್ಕಾಗಿ ಹೆಜ್ಜೆ’ ಅನ್ನೋ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದರು. ಸಂವಿಧಾನದ ಮೌಲ್ಯಗಳ ಮೇಲೆ ದಾಳಿಯಾಗುತ್ತಿರುವ ಇಂದಿನ ಹೊತ್ತಿನಲ್ಲಿ ನಾವು ಅಂಬೇಡ್ಕರ್ ಅವರ ಸಂಕಲ್ಪದೊಂದಿಗೆ ಒಟ್ಟಾಗಿ ಹೋರಾಡಬೇಕು ಅಂತಾ ಹೇಳಿದರು.




