ಪ್ರಜಾಸ್ತ್ರ ಸುದ್ದಿ
ಪುಣೆ(Pune): ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಗೋಂಧಿಯಾ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ವಿರುದ್ಧ ಕಿಡಿ ಕಾರಿದರು. ಸಂವಿಧಾನದಿಂದಾಗಿ ಪ್ರಜಾಪ್ರಭುತ್ವ ಉಳಿದಿದೆ. ಇದರ ಮೇಲೆ ಮೋದಿ, ಬಿಜೆಪಿ, ಆರ್ ಎಸ್ಎಸ್ ದಾಳಿ ನಡೆಸುತ್ತಿದೆ. ಸಂವಿಧಾನ ಉಳಿಸಲು ನಡೆಸುತ್ತಿರುವ ಹೋರಾಟ ಎಂದು ವಾಗ್ದಾಳಿ ನಡೆಸಿದರು.
ಬುದ್ಧ, ಬಸವಣ್ಣ, ನಾರಾಯಣಗುರು, ಶಿವಾಜಿ ಮಹಾರಾಜ್, ಸಾಹು ಮಹಾರಾಜ್, ಜ್ಯೋತಿಭಾ ಫುಲೆ, ಅಂಬೇಡ್ಕರ್ ಅವರ ಚಿಂತನೆಗಳನ್ನು ಸಂವಿಧಾನ ಹೊಂದಿದೆ. ಪ್ರಧಾನಿ ಮೋದಿಯವರು ಸಂವಿಧಾನ ಓದಿಲ್ಲ ಎನ್ನುವುದು ನನಗೆ ಗ್ಯಾರೆಂಟಿ ಇದೆ. ಓದಿದ್ದರೆ ಅಲ್ಲಿ ಬರೆದಿರುವುದನ್ನು ಗೌರವಿಸತ್ತಿದ್ದರು. ದ್ವೇಷವನ್ನು ಪ್ರೀತಿಯಿಂದ ಗೌರವಿಸಲು ನಡೆಸುತ್ತಿರುವ ಹೋರಾಟ ಅಂತಾ ಹೇಳಿದರು.