ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಸಂವಿಧಾನ ಅಂಗೀಕರಿಸಿ 75 ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನದ ಕುರಿತು ಮಾತನಾಡಲಾಗುತ್ತಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಮಾತನಾಡಿ, ಬಿಜೆಪಿ, ಆರ್ ಎಸ್ಎಸ್ ಸಾವರ್ಕರ್ ಸಿದ್ಧಾಂತವನ್ನು ನಂಬುತ್ತವೆ. ವೇದದ ಬಳಿಕ ಮನುಸ್ಮೃತಿಯನ್ನು ಹಿಂದೂಗಳು ಹೆಚ್ಚು ಆರಾಧಿಸುತ್ತಾರೆ ಎಂದು ಸಾವರ್ಕರ್ ಹೇಳಿದ್ದರು. ಆದರೆ, ನಿಮ್ಮ ಬಾಯಲ್ಲಿ ಸಂವಿಧಾನ ರಕ್ಷಣೆಯ ಮಾತುಗಳು ಕೇಳಿ ಬರುತ್ತಿರುವುದು ಸಂತಸ ತಂದಿದೆ ಎಂದು ಕುಟುಕಿದರು.
ಸಂವಿಧಾನದಲ್ಲಿ ಭಾರತೀಯ ಎನ್ನುವುದು ಏನೂ ಅಲ್ಲ. ಅದೊಂದು ಆಧನಿಕ ಭಾರತದ ದಾಖಲೆಯಾಗಿರಬಹುದು ಎಂದು ನಿಮ್ಮ ನಾಯಕ ಸಾವರ್ಕರ್ ಹೇಳಿದ್ದಾರೆ. ನೀವು ಸಂವಿಧಾನ ರಕ್ಷಿಸುತ್ತೇವೆ ಎಂದು ಹೇಳುತ್ತೀರಿ. ಆದರೆ, ನೀವು ನಂಬಿರುವ ನಾಯಕನ ಪರ ನಿಲ್ಲುತ್ತೀರಾ ಎಂದು ಕಾಲೆಳೆದರು. ಮುಂಬೈನ ಧಾರವಿಯನ್ನು ಅದಾನಿಗೆ ಕೊಟ್ಟಿದ್ದೀರಿ. ಈ ಮೂಲಕ ಸಣ್ಣ, ಮಧ್ಯಮ ವ್ಯಾಪಾರಿಗಳು ಬೆರಳು ಕತ್ತರಿಸಿದ್ದೀರಿ. ಬೆಂಬಲ ಬೆಲೆ ಕೇಳಿದ ರೈತರ ಬೆರಳು ಕತ್ತರಿಸಿದ್ದೀರಿ ಎನ್ನುವ ಮೂಲಕ ಏಕಲವ್ಯ ಹಾಗೂ ದ್ರೋಣಾಚಾರ್ಯರ ಕಥೆ ಹೇಳಿ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.