ಪ್ರಜಾಸ್ತ್ರ ಸುದ್ದಿ
ಚೆನ್ನೈ(Chennai): ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿರುವ ಅಕ್ಷರ್ ಪಟೇಲ್ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಡೆಲ್ಲಿ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಚೆನ್ನೈ ಸತತ ಮೂರು ಸೋಲು ಕಂಡಿದೆ. 2025ನೇ ಸಾಲಿನ ಐಪಿಎಲ್ ಟ್ರೂನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹ್ರ್ಯಾಟಿಕ್ ವಿಜಯ ಸಾಧಿಸಿತು. ಇದರಲ್ಲಿ ಕೆ.ಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್ ಇದೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲ ಓವರ್ ನಲ್ಲಿಯೇ ಜಾಕ್ ಫಾರ್ಸರ್ ವಿಕೆಟ್ ತೆಗೆದ ಖಲೀಲ್ ಅಹ್ಮದ್ ಡಿಸಿಗೆ ಶಾಕ್ ನೀಡಿದರು. ಆದರೆ, ಕೆ.ಎಲ್ ರಾಹುಲ್ ಗಟ್ಟಿಯಾಗಿ ನಿಂತುಕೊಂಡರು. ರಾಹುಲ್ 77, ಅಭಿಷೇಕ್ ಪೊರೆಲ್ 33, ನಾಯಕ ಅಕ್ಷರ್ ಪಟೇಲ್ 21, ರಿಜ್ವಿ 20, ಸ್ಟಬ್ಸ್ 24 ರನ್ ಗಳಿಂದಾಗಿ 6 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಖಲೀಲ್ 2, ಜಡೇಜಾ, ನೂರ್ ಅಹ್ಮದ್, ಇಂಪ್ಯಾಕ್ಟ್ ಪ್ಲೇಯರ್ ಮತೀಶ್ ಪತಿರಾಣಾ ತಲಾ 1 ವಿಕೆಟ್ ಪಡೆದರು.
184 ರನ್ ಗಳ ಗುರಿ ಬೆನ್ನು ಹತ್ತಿದ ಋತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್ಕೆ ಸಹ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. 41 ರನ್ ಗಳಿಸುವಷ್ಟರಲ್ಲಿ ರಚಿನ್ ರವಿಚಂದ್ರ 3, ಡೆವೊನ್ 13 ಹಾಗೂ ನಾಯಕ ಗಾಯಕ್ವಾಡ್ 5 ರನ್ ಗಳಿಸಿ ಔಟ್ ಆದರು. ವಿಜಯ ಶಂಕರ ಅಜೇಯ 69, ಧೋನಿ ಅಜೇಯ 30 ರನ್ ಗಳಿಸಿದೂ ಗೆಲುವು ದಾಖಲಿಸಲು ಆಗಲಿಲ್ಲ. ಇವರು ಹೊಡಿ ಬಡಿ ಆಟವಾಡದೆ ಏಕದಿನ ಪಂದ್ಯದಂತೆ ಆಡಿದ್ದು ಮುಳುವಾಯ್ತು. ಹೀಗಾಗಿ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿ 25 ರನ್ ಗಳಿಂದ ಸೋಲು ಕಂಡಿತು. ಡೆಲ್ಲಿ ಪರ ವಿಪ್ರಾಜ್ ನಿಗಮ್ 2, ಸ್ಟಾರ್ಕ್, ಇಂಪ್ಯಾಕ್ಟ್ ಪ್ಲೇಯರ್ ಮುಖೇಶ್ ಕುಮಾರ್, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.