ಪ್ರಜಾಸ್ತ್ರ ಸುದ್ದಿ
ರಾಯಚೂರು(Raichoru): ಫೋಟೋಶೂಟ್ ನೆಪದಲ್ಲಿ ಗಂಡನನ್ನು ಸೇತುವೆ ಕಡೆ ಕರೆದುಕೊಂಡು ಬಂದು, ನಂತರ ನದಿಗೆ ತಳ್ಳಿದ ಘಟನೆ ಗುರ್ಜಾಪುರ ಬ್ರಿಡ್ಜ್ ಹತ್ತಿರ ನಡೆದಿದೆ. ಬಿದ್ದ ವ್ಯಕ್ತಿಗೆ ಈಜು ಬರುತ್ತಿದ್ದ ಕಾರಣ ಈಜಿಕೊಂಡು ನದಿ ನಡುವೆ ಬಂದು ಬಂಡೆಯೊಂದರ ಮೇಲೆ ಕುಳಿತುಕೊಂಡಿದ್ದಾನೆ. ನಂತರ ರಕ್ಷಣೆಗಾಗಿ ಕೂಗಾಡಿದಾಗ ಜನರು ಆಗಮಿಸಿ 2 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬದುಕಿಸಿದ್ದಾರೆ.
ಪತ್ನಿಯನ್ನು ಕಳಿದರೆ ಕಾಲು ಜಾರಿ ಅವರೆ ಬಿದ್ದಿದ್ದಾರೆ ಎನ್ನುತ್ತಾಳೆ. ಕೆಲ ಪ್ರತ್ಯಕ್ಷದರ್ಶಿಗಳು ಆಕೆಯೇ ತಳ್ಳಿದ್ದಾಳೆ ಎನ್ನುತ್ತಾರೆ. ಆದರೆ, ಘಟನೆ ಹೇಗೆ ನಡೆದಿದೆ. ಇದರ ಸತ್ಯಾಸತ್ಯತೆ ಏನು ಅನ್ನೋ ಪ್ರಶ್ನೆ ಎಲ್ಲರಲ್ಲಿ ಮೂಡಿದೆ. ಈ ದಂಪತಿ ಯಾರು? ಇಲ್ಲಿ ನಿಜಕ್ಕೂ ಫೋಟೂಶೂಟ್ ಸಲುವಾಗಿ ಬಂದಿದ್ದರಾ? ಪತಿ ಕೊಲೆಗೆ ಪತ್ನಿ ಸಂಚು ರೂಪಿಸಿದ್ದಳಾ ಅನ್ನೋದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.