ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಳೆದ ರಾತ್ರಿ ರಾಜಧಾನಿಯಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ರಸ್ತೆಗುಂಡಿಗಳು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ಸಾರ್ವಜನಿಕರು ಹೈರಾಣಾದರು.
ಹೆಬ್ಬಾಳದಿಂದ ವಿಮಾನ ನಿಲ್ದಾಣದ ರಸ್ತೆ, ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ ಹಾಗೂ ಅಯ್ಯಪ್ಪ ಅಂಡರ್ ಪಾಸ್, ಮಡಿವಾಳದಿಂದ ಎಸ್ಪಿ ರಸ್ತೆಯ ಮಾರ್ಗಗಳು ಜಲಾವೃತಗೊಂಡಿವೆ. ಐಟಿಐ ಗೇಟ್ ನಿಂದ ಕಸ್ತೂರಿನಗರ, ರಾಯಸಂದ್ರದಿಂದ ಚೂಡಸಂದ್ರ, ವರ್ತೂರುನಿಂದ ಗುಂಜೂರು, ವೀರಸಂದ್ರದಿಂದ ಹುಸ್ಕೂರು ಗೇಟ್ ಸೇರಿ ಅನೇಕ ಕಡೆ ನೀರು ತುಂಬಿಕೊಂಡಿದೆ.